ಕ್ರೀಡೆ

ರೋಲರ್ ಸ್ಕೇಟಿಂಗ್ ಹಾಕಿ: ಹರ್ಯಾಣ ಪಾರಮ್ಯ

ಬೆಳಗಾವಿ: ನಗರದ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ಅಂಗಣದಲ್ಲಿ ನಡೆಯುತ್ತಿರುವ 50ನೇ ಸ್ವರ್ಣ ಜಂುಂತಿ ರಾಷ್ಟ್ರೀಂು ರೋಲರ್ ಸ್ಕೇಟಿಂಗ್ ಹಾಕಿ ಚಾಂಪಿಂುನ್‌ಶಿಪ್‌ನ ನಾಲ್ಕೂ ವಿಭಾಗದಲ್ಲಿ ಹರ್ಯಾಣ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರೆ ಎರಡು ವಿಭಾಗದಲ್ಲಿ ಚಂಡೀಗಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ಹರ್ಯಾಣ ತಂಡ ಈಗಾಗಲೇ ಮಹಿಳೆಯರ ಸೀನಿಯರ್ ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಬುಧವಾರ ನಡೆದ ಇನ್ನಿತರ ವಿಭಾಗಗಳ ಅಂತಿಮ ಪಂದ್ಯಗಳಲ್ಲಿ ಹರ್ಯಾಣದ ಸಬ್ ಜೂನಿಯರ್ ಬಾಲಕರು, ಜೂನಿಯರ್ ಬಾಲಕರು ಹಾಗೂ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಆದರೆ ಪುರುಷರ ಸೀನಿಯರ್ ಪಂದ್ಯದಲ್ಲಿ ಮಾತ್ರ ಹರ್ಯಾಣ ತನ್ನ ಸಾಂಪ್ರದಾಯಿಕ ಎದುರಾಳಿ ಚಂಡೀಗಡ ತಂಡಕ್ಕೆ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಚಂಡೀಗಡ ತಂಡ ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲೂ ಪ್ರಶಸ್ತಿ ಗೆದ್ದುಕೊಂಡಿತು.
ಪುರುಷರ ಸೀನಿಯರ್ ವಿಭಾಗದಲ್ಲಿ ಚಂಡೀಗಡ ತಂಡ ಹರ್ಯಾಣವನ್ನು 5-1 ಗೋಲುಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಚಂಡೀಗಡ ಪರವಾಗಿ ಅಭಿಷೇಕ್ 1, ಗೌರವ್ ರೊಜಾ 2, ನವದೀಪ್ ಪುರಿ 1 ಹಾಗೂ ರತನ್‌ಪಾಲ್ 1 ಗೋಲು ಭಾರಿಸುವ ಮೂಲಕ ಪಂದ್ಯದ ಗೆಲುವಿಗೆ ಕಾರಣರಾದರು. ಆದರೆ, ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಮುನ್ನಡೆ ಕಾಯ್ದುಕೊಂಡಿದ್ದ ಹರ್ಯಾಣ ತಂಡವು ಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ತಂಡದ ಪರವಾಗಿ ಮನಪ್ರೀತ್-1 ಗೋಲು ಬಾರಿಸಿದರು.
3-0 ಗೆಲವು: ಜೂನಿಯರ್ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಹರ್ಯಾಣ ತಂಡ ಚಂಡೀಗಡ ವಿರುದ್ಧ 3-0 ಗೋಲುಗಳಿಂದ ಗೆಲವು ದಾಖಲಿಸಿತು. ಬುಧವಾರ ಸಂಜೆ ನಡೆದ ಬಾಲಕಿಯರ ಸಬ್ ಜೂನಿಯರ್ ಪಂದ್ಯಾವಳಿಯಲ್ಲಿ ಚಂಡೀಗಡ ತಂಡ ಹರ್ಯಾಣವನ್ನು 3-2 ಗೋಲುಗಳಿಂದ ಪರಾಭವಗೊಳಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಪಂದ್ಯ ಮುಗಿದ ಅರ್ಧ ಗಂಟೆಯಲ್ಲೇ ನಡೆದ ಬಾಲಕರ ಸಬ್ ಜೂನಿಯರ್ ಅಂತಿಮ ಪಂದ್ಯದಲ್ಲಿ ಹರ್ಯಾಣ ತಂಡ ಮುಯ್ಯಿ ತೀರಿಸಿಕೊಂಡಿತು. ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಚಂಡೀಗಡಕ್ಕೆ ಶರಣಾಗಿದ್ದ ಹರ್ಯಾಣ ಇಲ್ಲಿ ಚಂಡೀಗಡವನ್ನು ಅಷ್ಟೇ ಅಂತರ (3-2)ದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಬುಧವಾರ ಕೊನೆಯಲ್ಲಿ ನಡೆದ ಬಾಲಕಿಯರ ಜ್ಯೂನಿಯರ್ ವಿಭಾಗದ ಅಂತಿಮ ಪಂದ್ಯದಲ್ಲಿ ಹರ್ಯಾಣ ತಂಡ ಆಂಧ್ರಪ್ರದೇಶದ ವಿರುದ್ಧ ಗೋಲುಗಳ ಸುರಿಮಳೆಗರೆಯಿತು. ಹರ್ಯಾಣಾ ತಂಡ 9-0 ಅಂತರದಿಂದ ಆಂಧ್ರವನ್ನು ಮಣಿಸಿ ಪಂದ್ಯಾವಳಿಯ ತನ್ನ ನಾಲ್ಕನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯಾವಳಿಯ ಆರು ವಿಭಾಗಗಳಲ್ಲಿ ಹರ್ಯಾಣ ನಾಲ್ಕರಲ್ಲಿ ಹಾಗೂ ಚಂಡೀಗಡ 2ರಲ್ಲಿ ಪ್ರಶಸ್ತಿ ಪಡೆದುಕೊಂಡರೆ, ಚಂಡೀಗಡ ಮೂರರಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಹರ್ಯಾಣ ಎರಡರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಆಂಧ್ರಪ್ರದೇಶ ಜೂನಿಯರ್ ಬಾಲಕರ ವಿಭಾಗದಲ್ಲಿ ರನ್ನರ್ ಅಪ್ ಆಯಿತು.
ತೃತೀಯ ಸ್ಥಾನ (ಕಂಚಿನ ಪದಕ) ಪಡೆದ ತಂಡಗಳು: ಬಾಲಕಿಯರ ಸಬ್ ಜೂನಿಯರ್ಸ್ ವಿಭಾಗದಲ್ಲಿ ಕರ್ನಾಟಕ, ಪುರುಷರ ಸಿನಿಯರ್ಸ್ ವಿಭಾಗದಲ್ಲಿ ಜಮ್ಮುಕಾಶ್ಮೀರ, ಬಾಲಕರ ಜೂನಿಯರ್ಸ್ ವಿಭಾಗದಲ್ಲಿ ಪಂಜಾಬ್, ಬಾಲಕರ ಸಬ್ ಜೂನಿಯರ್ಸ್ ವಿಭಾಗದಲ್ಲಿ ಆಂಧ್ರಪ್ರದೇಶ, ಬಾಲಕಿಯರ ಜೂನಿಯರ್ಸ್ ವಿಭಾಗದಲ್ಲಿ ಚಂಡೀಗಡ ತಂಡಗಳು ಕಂಚಿನ ಪದಕ ಪಡೆದುಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ