ಕ್ರೀಡೆ

ನ್ಯೂಜಿಲೆಂಡ್‌ಗೆ ಲಂಕನ್ನರ ಸವಾಲು

ಮುಂಬೈ: ಅತಿಥೇಯ ಭಾರತವನ್ನು ಪರಾಭವಗೊಳಿಸುವ ಮೂಲಕ ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿರುವ ದೈತ್ಯ ಸಂಹಾರಿ ಶ್ರೀಲಂಕಾ ಮಹಿಳಾ ತಂಡ, ಮಾಜಿ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಶುಕ್ರವಾರ ಸೆಣಸಲಿದೆ.
ಸೂಪರ್ ಸಿಕ್ಸ್ ಹಂತದಲ್ಲಿ 6 ತಂಡಗಳು ಭಾಗವಹಿಸಿದ್ದು, ಲೀಗ್ ಹಂತದಲ್ಲಿನ ಎ ಮತ್ತು ಬಿ ಗುಂಪಿನ ತಲಾ ಆರು ತಂಡಗಳು ಪರಸ್ಪರ ಸೆಣೆಸಲಿವೆ. ಪಂದ್ಯಾವಳಿಯಲ್ಲಿ ದುರ್ಬಲ ತಂಡವೆಂದೇ ಪರಿಗಣಿಸಿದ್ದವರಿಗೆ, ನಿಮ್ಮ ತೀರ್ಮಾನ ತಪ್ಪು ಎನ್ನುವಂತೆ ಪ್ರದರ್ಶನ ತೋರುತ್ತಿರುವ ಶ್ರೀಲಂಕಾ, ಲೀಗ್ ಹಂತದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಒಂದು ವಿಕೆಟ್ ಅಂತರದಿಂದ ಸೋಲಿಸಿತ್ತು. ನಂತರ ಅತಿಥೇಯ ಭಾರತವನ್ನು 138 ರನ್‌ಗಳ ಅಂತರದಿಂದ ಪರಾಭವಗೊಳಿಸಿತ್ತು. ಕಳೆದ ಆವೃತ್ತಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಶ್ರೀಲಂಕಾ, ರನ್ನರ್ಸ್ ಅಪ್ ಆಗಿದ್ದ ಭಾರತವನ್ನು ಸುಲಭವಾಗಿ ಮಣಿಸುವ ಮೂಲಕ ಅಚ್ಚರಿ ಮೂಡಿಸಿತ್ತು.
ಭಾರತದ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟಿಂಗ್ ಪಾಳೆಯ ಗುಡುಗುವುದರೊಂದಿಗೆ 5 ವಿಕೆಟ್ ಕಳೆದುಕೊಂಡು 282 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಭಾರತದ ವಿರುದ್ಧ ಶ್ರೀಲಂಕಾದ ಅಗ್ರ ಕ್ರಮಾಂಕದ ನಾಲ್ವರು ಆಟಗಾರ್ತಿಯರು ಶತಕ ದಾಖಲಿಸಿದ್ದರು. ಈಗ ಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.
ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಿರುವ ಶ್ರೀಲಂಕಾದ ದೀಪಿಕಾ ರಾಸಂಗಿಕಾ (84), 31 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದ್ದ ಕೌಸಲ್ಯ ಲೋಕುಸೂರ್ಯ ಅವರು ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು. ನಂತರ ಬೌಲಿಂಗ್‌ನಲ್ಲೂ ಪಾರಮ್ಯ ಮೆರೆದಿದ್ದ ಲಂಕಾ ವನಿತೆಯರು ಭಾರತವನ್ನು144 ರನ್‌ಗಳಿಗೆ ಆಲೌಟ್ ಮಾಡಿದ್ದರು.
ಆದರೆ, ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾತ್ರ 368 ರನ್ ನೀಡುವ ಮೂಲಕ ಶ್ರೀಲಂಕಾ ಹೀನಾಯ ಸೋಲನುಭವಿಸಿತ್ತು. ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಲಂಕಾ ಜಾಗೃತೆಯ ಹೆಜ್ಜೆಯನ್ನಿಡಬೇಕಾಗಿದೆ.
'ನಾವು ಸೂಪರ್ ಸಿಕ್ಸ್ ಹಂತ ತಲುಪಿದ್ದೇವೆ ಎಂಬುದನ್ನು ನಂಬಲಿಕ್ಕೇ ಆಗುತ್ತಿಲ್ಲ. ನಮ್ಮ ಕನಸು ನನಸಾದಂತಾಗಿದೆ. ಕಳೆದ ವಿಶ್ವಕಪ್‌ನಲ್ಲಿ ನಾವು 8ನೇ ಸ್ಥಾನ ಪಡೆದಿದ್ದೆವು. ನಾವು ಸೂಪರ್ ಸಿಕ್ಸ್ ಪ್ರವೇಶಿಸಿರುವುದರಿಂದ ನಮ್ಮ ತವರಿನ ಜನತೆ ಪುಳಕಗೊಂಡಿದ್ದು, ನನಗೆ ದೂರವಾಣಿ ಕರೆ ಮಾಡಿ ಶುಭಾಷಯ ಕೋರಿದರು. ತಂಡದಲ್ಲಿ ಬದಲಾವಣೆ ಕಾಣುತ್ತಿರುವುದು ಸಂತಸ ತಂದಿದೆ' ಸಿರಿವರ್ದನೆ ಹೇಳಿದ್ದಾರೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡ ತಮ್ಮ ನೆರೆಯ ರಾಷ್ಟ್ರ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಅಂತರದಿಂದ ಸೋಲನುಭವಿಸಿದ ನಂತರ ಜಯದ ಹಾದಿಗೆ ಮರಳಲು ಎದುರುನೋಡುತ್ತಿದೆ.
ತಂಡದ ನಾಯಕತ್ವ ವಹಿಸಿಕೊಂಡಿರುವ ಆರಂಭಿಕ ಆಟಗಾರ್ತಿ ಬಾಟೇಸ್ ಕಳೆದ ಪಂದ್ಯದಲ್ಲಿ 102 ಮತ್ತು ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 73 ಹಾಗೂ ಪಾಕಿಸ್ತಾನದ ವಿರುದ್ಧ ಅಜೇಯ 65 ರನ್ ಗಳಿಸಿದ್ದರು. ಆದರೆ, ತಂಡದ ಮಧ್ಯಮ ಕ್ರಮಾಂಕ ಉತ್ತಮ ಪ್ರದರ್ಶನ ನೀಡದಿರುವುದು ಕಿವೀಸ್ ಪಡೆಗೆ ಆತಂಕ ಉಂಟುಮಾಡಿದೆ.  ದಕ್ಷಿಣ ಆಫ್ರಿಕಾ ವಿರುದ್ಧ 145 ರನ್ ಗಳಿಸಿ ತಂಡಕ್ಕೆ ಸಲಭ ಜಯ ತಂದುಕೊಟ್ಟಿದ್ದ ಸೋಫೀ ಡೆವೈನ್ ಅವರು ಶ್ರೀಲಂಕಾ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.ಇನ್ನು ದಕ್ಷಿಣ ಆಫ್ರಿಕಾವನ್ನು 170 ಮತ್ತು ಪಾಕಿಸ್ತಾವನ್ನು 104 ರನ್‌ಗಳಿಗೆ ನಿಯಂತ್ರಿಸಿದ್ದ ತನ್ನ ಬೌಲರ್‌ಗಳ ಮೇಲೆ ಕಿವೀಸ್ ಹೆಚ್ಚು ಅವಲಂಬಿತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!