ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕನಸಿನ ಕೂಸಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್ಗೆ ಅಂತಾರಾಷ್ಟ್ರೀಯ ಆಟಗಾರರ ಅಲಭ್ಯತೆಯಿಂದಾಗಿ ಈ ಪಂದ್ಯಾವಳಿಯನ್ನು ಮುಂದೂಡಲ್ಪಟ್ಟಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಿದ್ದ ಕೆಲ ಅಂತಾರಾಷ್ಟ್ರೀಯ ಆಟಗಾರರಿಗೆ ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳು ನಿರಾಕ್ಷೇಪಣ ಪತ್ರವನ್ನು ನೀಡಲು ನಿರಾಕರಿಸಿದೆ.
ಪಿಎಸ್ಎಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಹಲವು ದೇಶದ ಆಟಗಾರರ ಜತೆ ಪಿಸಿಬಿ ಒಪ್ಪಂದಕ್ಕೆ ಮುಂದಾಗಿತ್ತು. ಆದರೆ ಆ ಆಟಗಾರು ಪಂದ್ಯವಳಿಯಲ್ಲಿ ಭಾಗವಹಿಸಲು ಪಿಸಿಬಿ ಆಯಾ ದೇಶದ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿ ನಿರಾಕ್ಷೆಪಣ ಪತ್ರ ನೀಡುವಂತೆ ಮನವಿ ಮಾಡಿದಾಗ ಕ್ರಿಕೆಟ್ ಮಂಡಳಿಗಳು ನಿರಾಕರಿಸಿತು ಎಂದು ಮೂಲಗಳು ತಿಳಿಸಿವೆ.