ಲಂಡನ್: ಉಸಿರುಬಿಗಿ ಹಿಡಿಸುವಂತಿದ್ದ ಪುರುಷರ ಕ್ವಾರ್ಟರ್ ಫೈನಲ್‌ನಲ್ಲಿ ರೋಚಕವಾಗಿ ಜಯ ಸಾಧಿಸಿದ ಆ್ಯಂಡಿ ಮರ್ರೆ ಸೆಮಿಫೈನಲ್ ಪ್ರವೇಶಿಸಿ, ನೆರೆದಿದ್ದ ತಮ್ಮ ಅಭಿಮಾನಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದರು.
ಸ್ಪೇನ್‌ನ ಫರ್ನಾಂಡೊ ವಾರ್ಡಾಸ್ಕೊ ಅವರ ವಿರುದ್ಧ ಅವರು 4-6, 3-6, 6-1, 6-4, 7-5 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್‌ಗೆ ಕಾಲಿಟ್ಟರು.
ಆದರೆ, ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ ಮೊದಲೆರಡು ಸೆಟ್‌ಗಳನ್ನು ಗೆದ್ದು ಮಿಂಚು ಹರಿಸಿದ್ದರು.
ಆದರೆ, ಮೂರನೇ ಸೆಟ್‌ನಿಂದ ಮರ್ರೆ ಅವರ ಜಾದೂ ಆರಂಭವಾಯಿತು. ಮೂರನೇ ಸೆಟ್ ಅನ್ನು 6-1ರ ದೊಡ್ಡ ಅಂತರದಲ್ಲಿ ಜಯಗಳಿಸಿದರಾದರೂ, ಅದಾಗಲೇ ಎರಡು ಸೆಟ್ ಗೆದ್ದಿದ್ದ ವರ್ಡಾಸ್ಕೊ ಯಾವುದೇ ಕ್ಷಣದಲ್ಲಾದರೂ, ಇನ್ನೊಂದು ಸೆಟ್ ಗೆದ್ದುಕೊಂಡು ಪಂದ್ಯದಲ್ಲಿ ಜಯಗಳಿಸಿಬಿಡಬಹುದೆಂಬ ಆತಂಕ ಮರ್ರೆ ಅಭಿಮಾನಿಗಳಿಗಿತ್ತು.
ಆದರೆ, ಮರ್ರೆ ಅದಕ್ಕೆ ಅವಕಾಶ ಕೊಡಲಿಲ್ಲ. ಮೂರನೇ ಸೆಟ್ ಗೆದ್ದ ನಂತರ, ನಾಲ್ಕನೇ ಸೆಟ್‌ನಲ್ಲಿ ಅವರು ಪುನಃ ವಿಜೃಂಭಿಸಿ ಆ ಸೆಟ್‌ನಲ್ಲಿ 6-4ರ ಜಯ ಕಂಡರು.
ಆಗ, ಇಬ್ಬರೂ ತಲಾ ಎರಡು ಸೆಟ್‌ಗಳಲ್ಲಿ ಜಯ ಕಂಡಂತಾಗಿತ್ತು.
ಹಾಗಾಗಿ, ಐದನೇ ಹಾಗೂ ಕೊನೆಯ ಸೆಟ್ ಇಬ್ಬರ ಪಾಲಿಗೆ ನಿರ್ಣಾಯಕ ಸೆಟ್ ಆಯಿತು.
ಆದರೆ, ಇಲ್ಲೂ ಛಲ ಬಿಡದೇ ಆಡಿದ ಮರ್ರೆ, ಈ ಸೆಟ್‌ನಲ್ಲೂ ವಿಜಯಿಯಾದರಲ್ಲದೇ, ಅವರ ಅಭಿಮಾನಿಗಳಿಗೆ ಸಮಾಧಾನ ತಂದರು.