ಕ್ರೀಡೆ

ವಿಂಬಲ್ಡನ್: ಸಾನಿಯಾ ಸವಾಲು ಅಂತ್ಯ

ಲಂಡನ್: ವಿಂಬಲ್ಡನ್ ಭಾರತದ ಕೊನೆಯ ಭರವಸೆಯಾಗಿದ್ದ ಸಾನಿಯಾ ಮಿರ್ಜಾ ಅವರು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸೋಲುವ ಮೂಲಕ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಂತಾಗಿದೆ.
ಸಾನಿಯಾ ಮಿರ್ಜಾ ಅವರು ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರೋಮೆನಿಯಾದ ಜತೆಯಾಟಗಾರ ಹೋರಿಯಾ ಟೆಕುವಾ ಜತೆ ಸೋಲನುಭವಿಸಿದರು. ಸಾನಿಯಾ ಮತ್ತು ಟೆಕುವಾ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಡೇನಿಯಲ್ ನೆಸ್ಟೋರ್ ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಚ್ ಜೋಡಿ ವಿರುದ್ಧ 7-6 (7-5), 7-6 (7-5) ಸೆಟ್‌ಗಳ ಅಂತರದಿಂದ ಪರಾಭವ ಹೊಂದಿತು.
ಭಾರತ ಮತ್ತು ರೋಮೆನಿಯಾ ಜೋಡಿ ಪಂದ್ಯದಲ್ಲಿ ನಿರಂತರವಾಗಿ ತಪ್ಪುಗಳನ್ನು ಎಸಗಿದ್ದು ಪಂದ್ಯದಲ್ಲಿ ಸೋಲಿಗೆ ಪ್ರಮುಖ ಕಾರಣವಾಯಿತು. ದ್ವಿತೀಯ ಸೆಟ್‌ನಲ್ಲಿ ಸಾನಿಯಾ ಮತ್ತು ಟೆಕುವಾ ಜೋಡಿ ಎದುರಾಳಿಯ ಸರ್ವ್ ಎದುರಿಸುವಲ್ಲಿ ವಿಫಲವಾಯಿತು.ಅಲ್ಲದೆ ಸಾನಿಯಾ ಮಿರ್ಜಾ ಪರಿಣಾಮಕಾರಿಯಾದ ಸರ್ವ್ ಮಾಡಲಿಲ್ಲ. ಆದರೆ, ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಕೆನಡಾದ ಡೇನಿಯಲ್ ನೆಸ್ಟೋರ್ ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಚ್ ಜೋಡಿ ಸೆಮಿಫೈನಲ್‌ಗೆ ಹೆಜ್ಜೆ ಹಾಕಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!