ನವದಹೆಲಿ: ಐಪಿಎಲ್ ಮಾದರಿಯ ಫುಟ್ಬಾಲ್ ಲೀಗ್ಗೆ ಐ-ಲೀಗ್ ಕ್ಲಬ್ಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲೇ, ಪಂದ್ಯಾವಳಿಯ ಮುಂದಿನ ರೂಪರೇಷಗಳನ್ನು ತಯಾರಿಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ ಉನ್ನತ ಅಧಿಕಾರಿಗಳು ಮತ್ತು ಪ್ರಮುಖ ಪ್ರಯೋಜಕತ್ವ ಪಾಲುದಾರ ಕಂಪನಿ ಐಎಂಜಿ ರಿಲಿಯನ್ಸ್ನೊಂದಿಗೆ ಮಂಗಳವಾರ ಸಭೆ ಸೇರಲಿದ್ದಾರೆ. ಬರುವ ವರ್ಷ ಜನವರಿಯಿಂದ ಮಾರ್ಚ್ವರೆಗೆ ನಡೆಯಲಿರುವ ಪಂದ್ಯಾವಳಿಯನ್ನು ಎಐಎಫ್ಎಫ್ ಮತ್ತು ಐಎಂಜಿ ರಿಲಿಯನ್ಸ್ ಜಂಟಿಯಾಗಿ ಆಯೋಜಿಸಿವೆ. ಆದರೆ, ಐ- ಲೀಗ್ ಕ್ಲಬ್ಗಳು ತಮ್ಮ ಆಟಗಾರರನ್ನು ಪಂದ್ಯಾವಳಿಗೆ ಕಳುಹಿಸಲು ವಿರೋಧ ವ್ಯಕ್ತಪಡಿಸಿರುವುದು ಈಗ ವಿವಾದವಾಗಿ ಮಾರ್ಪಟ್ಟಿದೆ.