ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಡಿವಿಷನ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಬೆಂಗಳೂರು ಎಲ್ಲೊಸ್ ತಂಡವು ಯೂನಿವರ್ಸಲ್ ವಿರುದ್ಧ 11-0 ಅಂತರದಲ್ಲಿ ಜಯ ಸಾಧಿಸಿದೆ.
ಬೆಂಗಳೂರು ಎಲ್ಲೊಸ್ ತಂಡದ ಪರ ಪೌಲ್ 3, ಆ್ಯಂಟೊ 8, 40, 55, ಸುನಿಲ್ 12, ರೂಪೇಶ್ 23, ಅಶ್ವಿನ್ 29, 42, 53, ಮಣಿ 48, ಮುರಳಿ 59ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದಾರೆ.
ದಿನದ ಮೊದಲ ಪಂದ್ಯದಲ್ಲಿ ಚಿನ್ನಪ್ಪ ಗಾರ್ಡೆನ್ ತಂಡವು ಸನ್ ರೈಸಿಂಗ್ ತಂಡದ ವಿರುದ್ಧ 1-1 ಅಂತರದ ಡ್ರಾ ಸಾಧಿಸಿದೆ. ಚಿನ್ನಪ್ಪ ಗಾರ್ಡೆನ್ ಪರ ಬೆರ್ನಾಡ್ 24ನೇ, ಸನ್ ರೈಸಿಂಗ್ ತಂಡದ ಪರ ಬಾಲಾಜಿ 37ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಮೂರನೇ ಪಂದ್ಯದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತಂಡವು ನಾಡ ಪ್ರಭು ಕೆಂಪೇಗೌಡ ತಂಡದ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತಂಡದ ಪರ ರಮೀಜ್ 46, 53 ಹಾಗೂ 58ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.