ಸಿಡ್ನಿ: ಮಂಗಳವಾರ ಆರಂಭವಾಗಲಿರುವ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ತಮ್ಮ ಟೀ ಶರ್ಟ್‌ನಲ್ಲಿ ಆಸ್ಟ್ರೇಲಿಯನ್ ಲಾಂಛನದ ಕೆಳಗೆ ನಂ.408ನ್ನು ಧರಿಸಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯನ್ ಕ್ರಿಕೆಟಿಗರು ಇತ್ತೀಚೆಗೆ ಬೌನ್ಸರ್‌ಗೆ ಬಲಿಯಾದ ಫಿಲಿಪ್ ಹ್ಯೂಸ್‌ಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಕಣಕ್ಕಿಳಿಯಲಿದೆ. ಆಸಿಸ್ ಆಟಗಾರರ ಶರ್ಟ್‌ಗಳಲ್ಲಿ 408 ಎಂಬ ಸಂಖ್ಯೆಯನ್ನು ಎಂಬ್ರಾಯಿಡರಿ ಮಾಡಲಾಗಿದ್ದು, ಇದು ಹ್ಯೂಸ್‌ಗೆ ತಾವು ಸಲ್ಲಿಸುವ ಶ್ರದ್ಧಾಂಜಲಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.
ಟೆಸ್ಟ್ ಲೆವೆಲ್‌ನಲ್ಲಿ ದೇಶವನ್ನು ಪ್ರತಿನಿಧೀಕರಿಸಿದ 408ನೇ ಆಟಗಾರನಾಗಿದ್ದಾನೆ ಫಿಲಿಪ್ ಹ್ಯೂಸ್. ಆದ್ದರಿಂದ 406 ಎಂಬ ಸಂಖ್ಯೆಯನ್ನು ಎಲ್ಲರೂ ಧರಿಸುವ ಮೂಲಕ ಹ್ಯೂಸ್ ನೆನಪನ್ನು ತಮ್ಮ ಹೃದಯದಲ್ಲಿ ಹೊತ್ತು ಈ ಪಂದ್ಯವನ್ನು ಆಡಲಿದ್ದಾರೆ ಎಂದು ಆಸಿಸ್ ಕ್ರಿಕೆಟ್ ಮೂಲಗಳು ಹೇಳಿವೆ.