ಚೆನ್ನೈಯಿನ್ ಎಫ್‌ಸಿ ವಿರುದ್ಧ ಪ್ರಾಬಲ್ಯ ಮೆರೆದ ಎಫ್‌ಸಿ ಗೋವಾ ತಂಡ 
ಕ್ರೀಡೆ

ಗೆದ್ದ ಗೋವಾ

ಪಂದ್ಯದ ಆರಂಭದಿಂದ ಅಂತ್ಯದವರೆಗೂ ಚೆನ್ನೈಯಿನ್ ಎಫ್‌ಸಿ...

ಗೋವಾ: ಪಂದ್ಯದ ಆರಂಭದಿಂದ ಅಂತ್ಯದವರೆಗೂ ಚೆನ್ನೈಯಿನ್ ಎಫ್‌ಸಿ ವಿರುದ್ಧ ಪ್ರಾಬಲ್ಯ ಮೆರೆದ ಎಫ್‌ಸಿ ಗೋವಾ ತಂಡದ ಆಟಗಾರರು ಐಎಸ್‌ಎಲ್ ಪಂದ್ಯದಲ್ಲಿ ಅರ್ಹ ಗೆಲುವು ದಾಖಲಿಸಿದ್ದಾರೆ.

ಶುಕ್ರವಾರ ಜವಹಾರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಫ್‌ಸಿ ಗೋವಾ 3-1 ಗೋಲುಗಳ ಅಂತರದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಗೋವಾ ಪ್ರಯತ್ನಿಸುತ್ತದೆ.

ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ತಂಡವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈಯಿನ್ ಎಫ್‌ಸಿಯನ್ನು ಮಣಿಸಿದ ಗೋವಾ, ತನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಈ ಪಂದ್ಯದಲ್ಲಿ ಚೆನ್ನೈ ತಂಡ ಸೋತಿದ್ದರೂ, ಅಗ್ರಸ್ಥಾನವನ್ನು ಕಳೆದುಕೊಂಡಿಲ್ಲ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಗೋವಾ, 23ನೇ ನಿಮಿಷದಲ್ಲಿ ರೊಮೆಯೊ ಗಳಿಸಿದ ಗೋಲಿನಿಂದ ತನ್ನ ಖಾತೆಯನ್ನು ತೆರೆಯಿತು.

ನಂತರ 41ನೇ ನಿಮಿಷದಲ್ಲಿ ಸ್ಯಾಂಟೋಸ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಅಂತರವನ್ನು ಹೆಚ್ಚಿಸಿಕೊಂಡರು. ಈ ಮೂಲಕ ಪಂದ್ಯದ ಮೊದಲಾರ್ಧದಲ್ಲೇ 2-0ಗೋಲುಗಳ ಮುನ್ನಡೆ ಪಡೆಯಿತು. ಇನ್ನು ದ್ವಿತೀಯಾರ್ಧದಲ್ಲಿ 62ನೇ ನಿಮಿಷದಲ್ಲಿ ಸ್ಲೆಪಿಕಾ ಗೋಲು ದಾಖಲಿಸಿ ತಂಡದ ಚೆನ್ನೈಯಿನ್ ಎಫ್‌ಸಿ ಗೋಲು ದಾಖಲಿಸಲು ಪ್ರಯತ್ನಿಸಿದರೂ, ಗೋವಾ ರಕ್ಷಣಾ ವಿಭಾಗವನ್ನು ಹಿಂದಿಕ್ಕಿ ಗೋಲು ದಾಖಲಿಸಲು ಯಶಸ್ವಿಯಾಗಲಿಲ್ಲ. ಪಂದ್ಯದ ಅಂತಿಮ ಕ್ಷಣದಲ್ಲಿ ಚೆನ್ನೈನ ಮೌರಿಸ್ ಗೋಲು ದಾಖಲಿಸಿದರೂ, ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.

ಈವರೆಗೆ 13 ಪಂದ್ಯಗಳನ್ನಾಡಿರುವ ಚೆನ್ನೈಯಿನ್ ಎಫ್‌ಸಿ 6 ಗೆಲುವು, 3 ಸೋಲು, 4 ಡ್ರಾ ಫಲಿತಾಂಶದಿಂದ 22 ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನದಲ್ಲಿದೆ.

ಇನ್ನು ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ಗೋವಾ ತನ್ನ 13 ಪಂದ್ಯಗಳ ಪೈಕಿ 6ರಲ್ಲಿ ಗೆಲುವು, 3ರಲ್ಲಿ ಡ್ರಾ ಹಾಗೂ 4ರಲ್ಲಿ ಸೋಲನನುಭವಿಸಿ 21 ಅಂಕಗಳನ್ನು ಸಂಪಾದಿಸಿದ್ದು, ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.

ಈ ಎರಡು ತಂಡಗಳು ಈಗಾಗಲೇ ಉಪಾಂತ್ಯಕ್ಕೆ ಬಹುತೇಕ ಪ್ರವೇಶ ಪಡೆದಿದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕಾಗಿ ಕಾದಾಟ ನಡೆಸುತ್ತಿವೆ.

ಪುಣೆಗೆ ಡೈನಾಮೋಸ್ ಸವಾಲು
 ಉಳಿದಿರುವ ಎರಡು ಲೀಗ್ ಪಂದ್ಯಗಳಲ್ಲಿ ಗೆದ್ದು ಉಪಾಂತ್ಯದ ಸುತ್ತಿಗೆ ಪ್ರವೇಶಿಸಲು ಯೋಜನೆ ರೂಪಿಸಿರುವ ಪುಣೆ ಎಫ್‌ಸಿ ಹಾಗೂ ಡೆಲ್ಲಿ ಡೈನಾಮೋಸ್ ತಂಡಗಳು ಪರಸ್ಪರ ಕಾದಾಟ ನಡೆಸಲು ಸಿದ್ಧವಾಗಿವೆ.

ಗುರುವಾರ ನಡೆಯಲಿರುವ ಟೂರ್ನಿಯ 51ನೇ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿದ್ದು, ರೋಚಕ ಹೋರಾಟದ ನಿರೀಕ್ಷೆ ಮೂಡಿದೆ.

ಪ್ರಸಕ್ತ ಅಂಕಪಟ್ಟಿಯಲ್ಲಿ 12 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 4ರಲ್ಲಿ ಡ್ರಾ ಹಾಗೂ 4ರಲ್ಲಿ ಸೋಲು ಕಂಡಿರುವ ಎಫ್‌ಸಿ ಪುಣೆ ಸಿಟಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದು, ಉಪಾಂತ್ಯ ಹಂತದ ಸನಿಹದಲ್ಲಿದೆ. ಇನ್ನು ಡೆಲ್ಲಿ ಡೈನಾಮೋಸ್ ಆಡಿರುವ 12 ಪಂದ್ಯಗಳ ಪೈಕಿ 3 ರಲ್ಲಿ ಗೆಲುವು, 5ರಲ್ಲಿ ಡ್ರಾ ಹಾಗೂ 4ರಲ್ಲಿ ಸೋಲನುಭವಿಸಿ 14 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದು, ಅಂತಿಮ ನಾಲ್ಕರ ಘಟಕ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಳ್ಳಲು ಉಳಿದ ಎರಡೂ ಪಂದ್ಯಗಳಲ್ಲೂ ಗೆಲುವು ದಾಖಲಿಸಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT