ಕೇಪ್‌ಟೌನ್: ಕರ್ನಾಟಕದ ಬ್ಯಾಟ್ಸ್‌ಮನ್ ಪ್ರಕಾಶ್ ಜಯರಾಮಯ್ಯ ಅವರ 82 ರನ್‌ಗಳ ಅಮೋಘ ಬ್ಯಾಟಿಂಗ್‌ನ ನೆರವಿನಿಂದಾಗಿ ಭಾರತ ಅಂಧರ ಕ್ರಿಕೆಟ್, ಭಾನುವಾರ ನಡೆದ 4 ನೇ ಆವೃತ್ತಿಯ ವಿಶ್ವಕಪ್ ಫೈನಲ್ಸ್‌ನಲ್ಲಿ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತ, 39.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿ , ಕಪ್ ತನ್ನದಾಗಿಸಿಕೊಂಡಿತು.
2 ನೇ ಬಾರಿ ಸಾಧನೆ: 2012ರಲ್ಲಿ ಮೊದಲ ಬಾರಿಗೆ ನಡೆದಿದ್ದ ಅಂಧರ ವಿಶ್ವಕಪ್ ಪಂದ್ಯಾವಳಿ ಗೆದ್ದಿದ್ದ ಭಾರತ, ಈಗ 2 ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಅಂಧರ ಕ್ರಿಕೆಟ್ ವಿಶ್ವಕಪ್ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದಿದೆ.
ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ, ಮಹಮ್ಮದ್ ಜಮೀಲ್ (102 ರನ್, 84 ಎಸೆತ, 11 ಬೌಂಡರಿ, 1 ಸಿಕ್ಸರ್), ಮಹಮ್ಮದ್ ಅಕ್ರಂ (ಅಜೇಯ 75 ರನ್, 43 ಎಸೆತ, 8 ಬೌಂಡರಿ, 1 ಸಿಕ್ಸರ್ ) ಸಹಾಯದಿಂದ 389 ರನ್ ಪೇರಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಆಸರೆಯಾದ ಪ್ರಕಾಶ್ ಜಯರಾಮಯ್ಯ (82 ರನ್, 38 ಎಸೆತ, 11 ಬೌಂಡರಿ, 1 ಸಿಕ್ಸರ್). ಇವರ ನೆರವಿನಿಂದ ಭಾರತ , 392 ರನ್ ಗಳಿಸಿ, 5 ವಿಕೆಟ್ ಜಯ ಸಂಪಾದಿಸಿತು.