ನವದೆಹಲಿ: 2014ರಲ್ಲಿ ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಭಾರತೀಯ ಕ್ರೀಡಾಗಳುಗಳ ಪಟ್ಟಿಯು ಹೊರಬಿದಿದ್ದು ಇದರಲ್ಲಿ ಹಿರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ 7ನೇ ಸ್ಥಾನ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ, 9 ಜನ ಕ್ರಿಕೆಟಿಗರೇ ಆಗಿದ್ದು ಸಾನಿಯಾ ಒಬ್ಬರೇ ಕ್ರಿಕೆಟೇತರ ಕ್ರೀಡಾಳು ಆಗಿದ್ದಾರೆ. ಅವರಿಗೆ ಇರುವ ಫಾಲೋವರ್‌ಗಳ ಸಂಖ್ಯೆ 2.12 ಮಿಲಿಯನ್.
ಕೊಹ್ಲಿ ಮೊದಲಿಗ: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪಟ್ಟಿಯ ಮೊದಲ ಸ್ಥಾನದಲ್ಲಿದ್ದಾರೆ. ಅವರ ಫಾಲೋವರ್‌ಗಳ ಸಂಖ್ಯೆ 4 ಮಿಲಿನಯ್! ಇದು ತೆಂಡೂಲ್ಕರ್ ಹಾಗೂ ಧೋನಿ ಅವರು ಹೊಂದಿರುವ ಫಾಲೋವರ್ ಸಂಖ್ಯೆಗಿಂತಲೂ ಹೆಚ್ಚು. ಹಾಗಾಗಿ, ತೆಂಡೂಲ್ಕರ್ ಅವರು ಪಟ್ಟಿಯ 2ನೇ ಸ್ಥಾನದಲ್ಲಿದ್ದಾರೆ, ಧೋನಿ 3ನೇ ಸ್ಥಾನದಲ್ಲಿದ್ದಾರೆ.
ತಂಡದಿಂದ ದೂರವೇ ಉಳಿದಿರುವ ಸೆಹ್ವಾಗ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರೂ ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಸೆಹ್ವಾಗ್ 4ನೇ ಸ್ಥಾನದಲ್ಲಿದ್ದರೆ, ಯುವರಾಜ್ ಸಿಂಗ್ 5ನೇ ಸ್ಥಾನದಲ್ಲಿ ಹಾಗೂ ಗಂಭೀರ್ 9ನೇ ಸ್ಥಾನದಲ್ಲಿದ್ದಾರೆ. ಜಹೀರ್ ಖಾನ್ ಅವರು 8ನೇ ಸ್ಥಾನದಲ್ಲಿದ್ದಾರೆ.