ಜಮಖಂಡಿ: ಇಲ್ಲಿನ ಧಾರವಾಡ-ವಿಜಯಾಪುರ ರಾಜ್ಯ ಹೆದ್ದಾರಿ ಬಳಿ ನಡೆಯುತ್ತಿರುವ 19ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಅತಿಥೇಯ ಕರ್ನಾಟಕಕ್ಕೆ ಮತ್ತೊಂದು ಚಿನ್ನ ಮತ್ತು ಒಂದು ಬೆಳ್ಳಿ, ಮೂರು ಕಂಚು ಪದಕಗಳು ಲಭಿಸಿದೆ. ಕರ್ನಾಟಕದ ವನಿತೆಯರ ತಂಡವು ಇಂದು ಒಂದು ಚಿನ್ನದ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮಹಿಳೆಯ ಟೀಂ ಟ್ರಯಲ್ಸ್‌ನಲ್ಲಿ ಕರ್ನಾಟಕ ತಂಡ(46.44.890 ನಿ.) ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಬಾಚಿಕೊಂಡಿತು. ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಹಾಗೂ ಕೇರಳ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವು.
ಇನ್ನು 10ಕಿ.ಮೀ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಟೀಂ ಟೈಂ ಟ್ರಯಲ್ಸ್‌ನಲ್ಲಿ ಕರ್ನಾಟಕದ ನೇಘಾ ಗೂಗಾಡ(16.12.678 ನಿ.) ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇನ್ನು ಅಸ್ಸಾಂನ ಅನು ಚುತಿಯಾ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಬಾಚಿಕೊಂಡರೆ, ಹರಿಯಾಣದ ಆಶು ಶರ್ಮಾ ತೃತೀಯ ಸ್ಥಾನ ಪಡೆದು ಕಂಚಿಗೆ ತೃಪ್ತರಾದರು.
-ಗುರುರಾಜ ವಾಳ್ವೇಕರ