ಕ್ರೀಡೆ

ಅವಕಾಶ ಕೈ ಚೆಲ್ಲಿದ ಕೆ.ಎಲ್. ರಾಹುಲ್

ಕರ್ನಾಟಕದ ಪ್ರತಿಭಾನ್ವಿತ ಯುವ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್‌ಗೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ ಸಾಮರ್ಥ್ಯ ಸಾಬೀತಿಗೆ ಉತ್ತಮ ಅವಕಾಶವೊಂದು ಒದಗಿಬಂದಿತ್ತು. ಆದರೆ, ಅದನ್ನು ಬಳಸಿಕೊಳ್ಳಲು ರಾಹುಲ್ ವಿಫಲರಾದರು.

ರಹಾನೆ ಔಟಾದ ನಂತರ 6ನೇ ಕ್ರಮಾಂಕದಲ್ಲಿ ಆಡಲು ಬಂದ ರಾಹುಲ್, ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ರನ್‌ಗಳಿಸಿದರು. ಲಿಯೋನ್‌ರ ಎಸೆತವನ್ನು ಶಾರ್ಟ್ ಲೆಗ್‌ನತ್ತ ಬಾರಿಸಿ 1ರನ್ ಗಳಿಸುವುದರೊಂದಿಗೆ ಅವರು ಮೊದಲ ಟೆಸ್ಟ್ ರನ್‌ಗಳಿಸಿದರು. ಆದರೆ, ತಾವು ಎದುರಿಸಿದ 7ನೇ ಎಸೆತದಲ್ಲಿ ಮತ್ತೆ ಲಿಯೋನ್ ದಾಳಿಗೆ ಉತ್ತರ ನೀಡುವ ಪ್ರಯತ್ನದಲ್ಲಿ ಮುಂದಾದಾಗ ಚೆಂಡು ಮಿಡ್‌ವಿಕೆಟ್ ಕ್ಷೇತ್ರದಲ್ಲಿ ಮೇಲಕ್ಕೆ ಚಿಮ್ಮಿತ್ತು.

ಸಿಡ್ಲ್, ಅದನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ವಿಫಲರಾಗಿ ರಾಹುಲ್‌ಗೆ ಜೀವದಾನ ನೀಡಿದರು. ಈ ಅಪಾಯದಿಂದ ಪಾರಾದರೂ ಎಚ್ಚೆತ್ತುಕೊಳ್ಳದ ಕರ್ನಾಟಕದ ಬ್ಯಾಟ್ಸ್‌ಮನ್ ಮರು ಎಸೆತದಲ್ಲಿ ಕೂಡ ಅಂತಹುದೇ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡರು. ಆಫ್ ಸ್ಟಂಪ್‌ನತ್ತ ಚಿಮ್ಮಿದ ಲಿಯೊನ್ ಎಸೆತಕ್ಕೆ ಸ್ವೀಪ್ ಮಾಡಲು ಮುಂದಾದರು. ಚೆಂಡು ಬ್ಯಾಟಿನಂಚಿಗೆ ಬಡಿದು ಮೇಲಕ್ಕೆ ಹಾರಿದಾಗ ಸ್ಕ್ವೇರ್‌ಲೆಗ್‌ನಲ್ಲಿದ್ದ ಹ್ಯಾಜಲ್‌ವುಡ್ ಸುಲಭ ಕ್ಯಾಚ್ ತೆಗೆದುಕೊಂಡು ರಾಹುಲ್‌ಗೆ ಹೊರದಾರಿ ತೋರಿಸಿದರು. ರಾಹುಲ್ 8 ಎಸೆತಗಳಲ್ಲಿ 3 ರನ್‌ಗಳಿಸಿದರು.

SCROLL FOR NEXT