ಕ್ರೀಡೆ

ವಿಜಯ್ ಮರ್ಚೆಂಟ್ ಅವರ ಕ್ರೀಡಾ ಮನೋಭಾವ

ಭಾರತ ಕ್ರಿಕೆಟ್‌ಗೆ ತನ್ನದೇ ಆದ ಇತಿಹಾಸವಿದೆ. ಇಂದು ಭಾರತ ಕ್ರಿಕೆಟ್‌ನಲ್ಲಿ ಅನೇಕ ಕ್ರೀಡಾಪಟುಗಳು ತಮ್ಮ ಪಾಲಿನ ಕಾಣಿಕೆಯನ್ನು ಸಲ್ಲಿಸಿದ್ದಾರೆ. 30ರ ದಶಕದಲ್ಲಿ  ಭಾರತ ಕ್ರಿಕೆಟ್ ತಂಡದ ಪ್ರಭಾವಶಾಲೀ ಆಟಗಾರರಲ್ಲಿ ವಿಜಯ್ ಮರ್ಚೆಂಟ್ ಸಹ ಒಬ್ಬರು. ಅವರು ತಮ್ಮ ಹದಿನೆಂಟು ವರ್ಷಗಳ ಕ್ರಿಕೆಟ್ ಆಟದಲ್ಲಿ ಹತ್ತು ಟೆಸ್ಟ್‌ಗಳು ಮತ್ತು 150 ಮೊದಲ ದರ್ಜೆ ಕ್ರಿಕೆಟ್ ಆಡಿದ್ದಾರೆ. ಅವರು ಆಡಿದ ಹತ್ತೂ ಟೆಸ್ಟ್‌ಗಳೂ ಇಂಗ್ಲೆಂಡ್ ವಿರುದ್ಧ ಆಡಿದವುಗಳೇ ಆಗಿವೆ. ಎರಡನೇ ಮಹಾಯುದ್ಧದ ಸಮಯವಾದ್ದರಿಂದ ಆ ಅವಧಿಯಲ್ಲಿ ಹೆಚ್ಚು ಕ್ರಿಕೆಟ್ ಆಟಗಳು ನಡಯದೇ ಇದ್ದುದು ಅವರ ದುರಾದೃಷ್ಟವೆನ್ನಬಹುದು. 1936ರ ಜುಲೈನಲ್ಲಿ ಲಿವರ್ ಪೂಲ್‌ನಲ್ಲಿ ಲಂಕಾಷೈರ್ ವಿರುದ್ಧ ನಡೆದ ಕ್ರಿಕೆಟ್ ಆಟ ಕೆಲವು ಕಾರಣಗಳಿಂದ ಅವಿಸ್ಮರಣೀಯವಾದುದು. ಹಿಂದೆಂದೂ ಆ ಮೈದಾನದಲ್ಲಿ ಸೋಲನ್ನನುಭವಿಸದ ಲಂಕಾಷೈರನ್ನು ಭಾರತ ತಂಡ ಮಣಿಸಿದ್ದು ಮತ್ತು ಆರಂಭಿಕ ಬ್ಯಾಟ್ಸ್‌ಮನ್ ವಿಜಯ್ ಮರ್ಚೆಂಟ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೊನೆಯವರೆಗೂ ಔಟಾಗದೇ ಉಳಿದಿದ್ದು ಒಂದು ದಾಖಲೆಯಾಗಿದೆ. ಇವೆಲ್ಲವಕ್ಕಿಂತ ಹೆಚ್ಚಾಗಿ ವಿಜಯ್ ಮರ್ಚೆಂಟ್ ಅವರ ಕ್ರೀಡಾ ಮನೋಭಾವ ಇತರರಿಗೆ ಮಾರ್ಗದರ್ಶಿಯಾಗಿದೆ. ಲಂಕಾಷೈರ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡ ಗೆಲ್ಲಲು 80 ರನ್ನುಗಳು ಬೇಕಾಗಿದ್ದವು. ತಂಡದ ನಾಯಕ ಲೆಸ್ಟರ್ ಆಡುತ್ತಿದ್ದರು.
ಅವರು ಹೊಡೆದ ಚೆಂಡು ಕವರ್ ಪಾಯಿಂಟ್‌ನಲ್ಲಿದ್ದ ವಿಜಯ್ ಮರ್ಚೆಂಟ್ ಕೈಸೇರಿತು. ಇಂಗ್ಲೆಂಡ್ ಆಟಗಾರರಿಗೆ ಇದು ಮನೋಸ್ಥೈರ್ಯವನ್ನು ಕುಗ್ಗಿಸುವ ಘಟನೆಯಾಗಿತ್ತು. ಆದರೆ ಅದೊಂದು ನೆಲಮಟ್ಟದ ಕ್ಯಾಚ್ ಆಗಿತ್ತು. ಅಲ್ಲದೆ ಈಗಿನ ಹಾಗೆ ಸೂಕ್ಷ್ಮವಾಗಿ ಗಮನಿಸಲು ದೂರದರ್ಶನದ ವ್ಯವಸ್ಥೆ ಇಲ್ಲದುದರಿಂದಲೂ, ಅಂಪೈರ್ ಅದನ್ನು ಕ್ಯಾಚ್ ಎಂದು ನಿರ್ಧರಿಸಿ ಔಟ್ ಎಂದು ಘೋಷಿಸಿದರು. ಹೀಗಾಗಿ ಲೆಸ್ಟರ್ ಮೈದಾನದಿಂದ ಹೊರ ನಡೆದರು. ಆದರೆ ಮರ್ಚೆಂಟ್ ಚೆಂಡನ್ನು ಹಿಡಿಯುವ ಮುನ್ನ ಅದು ನೆಲಕ್ಕೆ ತಾಕಿತ್ತು. ವಿಜಯ್ ಮರ್ಚೆಂಟ್ ಸುಮ್ಮನಿದ್ದರೆ ಭಾರತಕ್ಕೆ ಅನೂಕೂಲವಾಗುತ್ತಿತ್ತು. ಆದರೆ ಒಬ್ಬ ನೈಜ ಕ್ರೀಡಾಪಟುವಾದ್ದರಿಂದ ಅಂಪೈರ್ ಬ್ರಾಂಡ್ ಬಳಿ ಬಂದು, ಅದು ಕ್ಯಾಚ್ ಅಲ್ಲ ನೆಲಕ್ಕೆ ತಾಗಿದ ಬಾಲನ್ನು ತಾನು ಹಿಡಿದಿರುವುದಾಗಿ ಹೇಳಿದರು. ಆಗ ಮತ್ತೆ ಲೆಸ್ಟರ್ ಅವರನ್ನು ಹಿಂದಕ್ಕೆ ಕರೆಸಿ ಆಡಿಸಲಾಯಿತು. ಮರ್ಚೆಂಟ್ ಅವರ ಕ್ರೀಡಾ ಮನೋಭವವನ್ನು ಗಮನಿಸಿದ ಪ್ರೇಕ್ಷಕರು, ಅವರ ಬಗ್ಗೆ ತಮ್ಮ ಆಪಾರ ಮೆಚ್ಚುಗೆಯನ್ನು ದೀರ್ಘ ಕರತಾಡನದ ಮೂಲಕ ವ್ಯಕ್ತಪಡಿಸಿದರು. ಪಂದ್ಯ ಮುಗಿದ ಮೇಲೆ ಅಂಪೈರ್‌ಗಳೂ ಸಹ ವಿಜಯ್ ಅವರನ್ನು ಶ್ಲಾಘಿಸಿದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!