ಸೈನಾ ನೆಹ್ವಾಲ್ 
ಕ್ರೀಡೆ

ಸೈನಾ ನೆಹ್ವಾಲ್ ಕನಸು ಭಗ್ನ

ತೈ ಸರಸರನೆ ಅಂಕಗಳನ್ನು 21ಕ್ಕೇರಿಸಿಕೊಂಡು ಸೈನಾ ಅವರನ್ನು ಸೋಲಿಸಿದರು...

ಹಾಂಕಾಂಗ್: ಮೂರನೇ ಬಾರಿಗೆ ಸೂಪರ್ ಸೀರಿಸ್ ಪ್ರಶಸ್ತಿ ಗೆಲ್ಲುವ ಸೈನಾ ನೆಹ್ವಾಲ್ ಅವರ ಕನಸು ಭಗ್ನಗೊಂಡಿದೆ. ಶುಕ್ರವಾರ ನಡೆದ ಹಾಂಕಾಂಗ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಅವರು, ಥಾಯ್ಲೆಂಡ್‌ನ ತೈಜು-ಯಿಂಗ್ ವಿರುದ್ಧ 15-21, 19-21 ಅಂತರದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಮೊದಲ ಗೇಮ್‌ನಲ್ಲಿ ಸೈನಾ ಅವರು ಸ್ವಲ್ಪ ದಣಿದಂತೆ ಕಂಡುಬಂತು. ಕೊಂಚ ಸುಸ್ತಾದಂತೆ ಕಂಡುಬಂದ ಅವರ ಆಟದಲ್ಲಿ ಎಂದಿನಂತೆ ಚುರುಕು ಇರಲಿಲ್ಲ. ಮೊದಲ ಗೇಮ್‌ನ ಒಂದು ಹಂತದಲ್ಲಿ ತೈ ವಿರುದ್ಧ 2-2ರ ಸಮಬಲ ಸಾಧಿಸಿದರಾದರೂ ಆನಂತರ ತೈ ಅವರಿಗೆ ಅಂಕಗಳನ್ನು ಬಿಟ್ಟುಕೊಟ್ಟರು. ಸೈನಾ ಅವರ ದುರ್ಬಲ ಆಟದ ಲಾಭ ಪಡೆದ ತೈ ಮಿಂಚಿನ ಆಟವಾಡಿ ಶೀಘ್ರದಲ್ಲೇ ಮೊದಲ ಗೇಮ್ ಗೆದ್ದುಕೊಂಡರು.

ಆದರೆ, ಎರಡನೇ ಗೇಮ್‌ನಲ್ಲಿ ಸೈನಾ ಪಟ್ಟುಬಿಡದೇ ಹೋರಾಡಿದರು. ತೈ ವಿರುದ್ಧ ಸಮರ ಸಾರಿದ ಅವರು, ಎದುರಾಳಿಗೆ ತೀವ್ರ ಪೈಪೋಟಿ ನೀಡಿದರು. ಅತ್ತ ತೈ ಹಸ ಪ್ರತಿಸ್ಪರ್ಧೆ ನೀಡಿದರು.

ಒಬ್ಬರ ಹಿಂದೊಬ್ಬರಂತೆ ಅಂಕಗಳನ್ನು ಪೇರಿಸುತ್ತಾ ಸಾಗಿದ ಅವರು ಒಂದು ಹಂತದಲ್ಲಿ 19-19ರ ಸಮಬಲ ಸಾಧಿಸಿದರು.

ಆದರೆ, ಗೆಲುವಿಗಾಗಿ ಶಕ್ತಿ ಮೀರಿ ಹೋರಾಡಿದ ತೈ, ಸರಸರನೆ ಅಂಕಗಳನ್ನು 21ಕ್ಕೇರಿಸಿಕೊಂಡು ಸೈನಾ ಅವರನ್ನು ಸೋಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!