ಹೈದರಾಬಾದ್: 'ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಚೀನೀಯರನ್ನು ಮಣಿಸುವುದು ಅಸಾಧ್ಯದ ಮಾತು ಎಂಬ ನಮ್ಮಷ್ಟಕ್ಕೇ ನಾವು ಕಲ್ಪಿಸಿಕೊಂಡಿದ್ದ ಭ್ರಮೆ ಸುಳ್ಳಾಗಿದೆ.
ಇತ್ತೀಚೆಗಷ್ಟೇ ಚೀನಾ ಓಪನ್‌ನಲ್ಲಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಭಾರತೀಯರು ಪ್ರಶಸ್ತಿ ಗೆದ್ದಿದ್ದು ಇದಕ್ಕೆ ಸಾಕ್ಷಿ'- ಇಂಥ ಆತ್ಮವಿಶ್ವಾಸದ ನುಡಿಗಳನ್ನು ಹೇಳಿದ್ದು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಶ್ವ ಮಟ್ಟದಲ್ಲಿ ಭಾರತೀಯ ಶಟ್ಲರ್‌ಗಳು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಒತ್ತಿ ಹೇಳಿದ್ದಾರೆ. 'ಚೀನೀ ಆಟಗಾರರು ನಿಜಕ್ಕೂ ಪ್ರಬಲರು.
ಅವರನ್ನು ಪಂದ್ಯಗಳಲ್ಲಿ ಮಣಿಸುವುದೆಂದರೆ ಅದು ನಿಜಕ್ಕೂ ದೊಡ್ಡ ವಿಚಾರವೇ. ಅದರಲ್ಲೂ ಚೀನಾ ದೇಶದ ನೆಲದಲ್ಲೇ ಇತ್ತೀಚೆಗೆ ಅವರ ಆಟಗಾರರನ್ನೇ ಸೋಲಿಸುವುದು ಒಂದು ಸಾಧನೆಯಾದರೆ, ಪ್ರಶಸ್ತಿ ಗೆದ್ದುಕೊಳ್ಳುವುದು ಮತ್ತೊಂದು ಮಹತ್ಸಾಧನೆ' ಎಂದು ಅವರು ಹೇಳಿದ್ದಾರೆ.