ಬೆಂಗಳೂರು: ನಾಕೌಟ್ ಸುತ್ತಿನಲ್ಲಿ ಸತತ ಎರಡು ಗೆಲವು ದಾಖಲಿಸಿದ ಪಂಕಜ್ ಆಡ್ವಾಣಿ, ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ 32ರ ಸುತ್ತಿನ ಪುರುಷರ ವಿಭಾಗದಲ್ಲಿ ಭಾರತದ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಇಂಗ್ಲೆಂಡ್‌ನ ರೆಯಾನ್ ಕೌಸ್ಟರ್ ವಿರುದ್ಧ 5-0 ಅಂತರದಲ್ಲಿ ಗೆಲವು ದಾಖಲಿಸಿದರು. ಇನ್ನು ಚೀನಾದ ಯಾಂಗ್ ಬಿಂಗ್ಟಾವ್, ಭಾರತದ ವರುಣ್ ಮದನ್ ವಿರುದ್ಧ 5-1 ಗೆಲವು ದಾಖಲಿಸಿದರು.
ಇನ್ನು ಭಾರತದ ಭರವಸೆಯ ಆಟಗಾರ್ತಿ ಅಮೀ ಕಮಾನಿ, ತಮ್ಮ ಎದುರಾಳಿ ಬೆಲ್ಜಿಯಂನ ವೆಂಡಿ ಜೇನ್ಸ್ ವಿರುದ್ಧ 0-4 ಅಂತರದಲ್ಲಿ ಪರಾಭವಗೊಂಡರು. ಅರಾಂಕ್ಸಾ ಸ್ಯಾಂಚಿಸ್, ಹಾಂಕಾಂಗ್‌ನ ಆನ್ ಯೀ ವಿರುದ್ಧ 4-0 ಅಂತರದಲ್ಲಿ ಸೋತು ನಿರಾಸೆ ಅನುಭವಸಿದರು.