ಇಂಡಿಯನ್ ಪ್ರಿಮಿಯರ್ ಲೀಗ್ 
ಕ್ರೀಡೆ

ಏಪ್ರಿಲ್ 7ರಂದು ಐಪಿಎಲ್ ಗೆ ಅದ್ದೂರಿ ಚಾಲನೆ

ಐಪಿಎಲ್ 8ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಏ.7ರಂದು ಕೋಲ್ಕತಾದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕೋಲ್ಕತಾ: ಐಪಿಎಲ್ 8ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಏ.7ರಂದು ಕೋಲ್ಕತಾದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಈ ಸಮಾರಂಭದಲ್ಲಿ ಬಾಲಿವುಡ್ ನಟರು ಸೇರಿದಂತೆ ಖ್ಯಾತ ಕಲಾವಿದರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಸಮಾರಂಭ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಮೊದಲ ಪಂದ್ಯ ಏ.8ರಂದು ಈಡನ್ ಗಾರ್ಡನ್ ನಲ್ಲಿ ನಡೆಯಲಿದ್ದು, ಕೋಲ್ಕತಾ ನೈಟ್ ರೈಡರ್ಸ್-ಮುಂಬೈ ಇಂಡಿಯನ್ಸ್ ಸೆಣಸಲಿವೆ.

ಸ್ಟಾರ್ಕ್ ಅಲಭ್ಯ: ವಿಶ್ವಕಪ್ ನಲ್ಲಿ ಹೆಚ್ಚು ವಿಕೆಟ್ ಪಡೆದಿದ್ದ ಆಸೀಸ್ ನ ಮಿಚೆಲ್ ಸ್ಟಾರ್ಕ್ ಮಂಡಿ ನೋವಿನಿಂದ ಬಳಲುತ್ತಿದ್ದು, ಆರಂಭಿಕ ಪಂದ್ಯಗಳಲ್ಲಿ ಆರ್ಸಿಬಿ ಪರ ಆಡುತ್ತಿಲ್ಲ. ಅವರಿಗೆ 2-3 ವಾರ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದುಬಂದಿದೆ.

ಐ-ಲೀಗ್ ಪಂದ್ಯಗಳ ಸ್ಥಳಾಂತರ:
ಐಪಿಎಲ್ ಉದ್ಘಾಟನ ಸಮಾರಂಭ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ 2 ಐ-ಲೀಗ್ ಫುಟ್ಬಾಲ್ ಪಂದ್ಯಗಳನ್ನು ಬಾರಸಾತ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಸ್ಪೋರ್ಟಿಂಗ್ ಗೋವಾ ಮತ್ತು ರಾಯಲ್ ವಾಹಿಂಗ್ಡೊ ಹಾಗೂ ಬೆಂಗಳೂರು ಎಫ್ ಸಿ ಮತ್ತು ಮುಂಬೈ ಎಫ್ ಸಿ ನಡುವಣ ಪಂದ್ಯಗಳು ಸ್ಥಳಾಂತರವಾಗಲಿದೆ ಎಂದು ವರದಿಗಳು ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

ಆತ ಅಪ್ಪಿಕೊಳ್ಳುತ್ತಾರೆ, ಕಣ್ಣು ಹೊಡೆಯುತ್ತಾರೆ; ಪ್ರಿಯಾಂಕಾ ಉತ್ತಮ ವಿಪಕ್ಷ ನಾಯಕಿಯಾಗಬಹುದು: ರಾಹುಲ್ ವಿರುದ್ಧ ಕಿರಣ್ ರಿಜಿಜು ಟೀಕಾ ಪ್ರಹಾರ

ಮಧ್ಯಪ್ರಾಚ್ಯ ಯುದ್ಧ: ಅಡುಗೆ ಅನಿಲ ಕೊರತೆ ಬೆನ್ನಲ್ಲೆ ಏರ್ ಇಂಡಿಯಾ ಸಮೂಹದಿಂದ ಬೆಲೆ ಏರಿಕೆ ಶಾಕ್! Fuel surcharge ಏರಿಕೆ ಘೋಷಣೆ

ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಭರವಸೆ: ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ಸರ್ಕಾರಿ ವೈದ್ಯರು!

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ ಪ್ರಸ್ತಾಪ

SCROLL FOR NEXT