ನವದೆಹಲಿ: ಮಯಾಮಿ ಓಪನ್ ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ ಪ್ರಶಸ್ತಿ ಗೆಲ್ಲುವುದರೊಂದಿಗೆ ೧೦೦೦ ರ್ಯಾಂಕಿಂಗ್ ಅಂಕ ಗಳಿಸಿ, ವಿಶ್ವ ಡಬಲ್ಸ್ ನಲ್ಲಿ ನಂಬರ್ ೧ ಪಟ್ಟದತ್ತ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಪುಗಾಲು ಹಾಕಿದ್ದಾರೆ.
ಸದ್ಯಕ್ಕೆ ಸಾನಿಯಾ ಮೂರನೇ ಸ್ಥಾನದಲ್ಲಿದ್ದರು, ೭೬೪೦ ಅಂಕಗಳೊಂದಿಗೆ ಮೊದಲ ಮತ್ತು ಎರಡನೇ ಸ್ಥಾನ ಹಂಚಿಕೊಂಡಿರುವ ಇಟಾಲಿಯನ್ ಜೋಡಿ ಸಾರಾ ಏರ್ರಾಣಿ ಮತ್ತು ರಾಬರ್ಟಾ ವಿನ್ಸಿ ಅವರಿಗಿಂತ ಕೇವಲ ೧೪೫ ಅಂಕ ಹಿಂದಿದ್ದಾರೆ.
ಮಾರ್ಟಿನಾ ಜೊತೆ ಎರಡು ಪ್ರಶಸ್ತಿ ಗೆಲ್ಲುವುದರೊಂದಿಗೆ ಸಾನಿಯಾ ೭೪೯೫ ಅಂಕ ಪಡೆದು ಈಗ ಮೂರನೆ ಸ್ಥಾನ ಕಾಯ್ದುಕೊಂಡಿದಾರೆ.
ಸಾನಿಯಾ ಈ ವಾರ ಚಾರ್ಲೆಸ್ಟನ್ ನಲ್ಲಿ ಪ್ರಾರಂಭವಾಗುವ ಫ್ಯಾಮಿಲಿ ಸರ್ಕಲ್ ಪ್ರಶಸ್ತಿ ಗೆಲ್ಲಬೇಕಷ್ಟೇ ಮೊದಲನೇ ಸ್ಥಾನಕ್ಕೆ ಏರುವುದಕ್ಕೆ. ಈ ಹಿಂದೆ ೨೦೧೧ ರಲ್ಲಿ ಸಾನಿಯಾ ಚಾರ್ಲೆಸ್ಟನ್ ನಲ್ಲಿ ಎಲೆನಾ ವೆಸ್ನಿಯಾ ಜೊತೆ ಪ್ರಶಸ್ತಿ ಗೆದ್ದಿದ್ದರು.