ಸೈನಾ ನೆಹ್ವಾಲ್ 
ಕ್ರೀಡೆ

ಮತ್ತೆ ನಂಬರ್ 1 ಪಟ್ಟಕ್ಕೇರಿದ ಸೈನಾ ನೆಹ್ವಾಲ್

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತೆ ವಿಶ್ವದ ನಂಬರ್ ಒನ್ ಪಟ್ಟಕ್ಕೇರಿದ್ದಾರೆ...

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತೆ ವಿಶ್ವದ ನಂಬರ್ ಒನ್ ಪಟ್ಟಕ್ಕೇರಿದ್ದಾರೆ.

ಮಲೇಷಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ನಲ್ಲಿ ಚೀನಾದ ಎದುರಾಳಿ ಲೀ ಸೂಜಿಯಾ ವಿರುದ್ದ ಸೋಲುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಕಳೆದ ವಾರ ನಡೆದ ಸಿಂಗಾಪುರ್ ಓಪನ್ ಸೂಪರ್ ಸಿರೀಸ್ ನಿಂದ ವಿಶ್ವದ ನಂ.1 ಆರ್ಟಗಾರ್ತಿಯಾಗಿದ್ದ ಚೀನಾದ ಲೀ ಕ್ಷೆರುಯಿ ಅವರು ಹೊರ ಹೋದ ಪರಿಣಾಮ ಸೈನಾ ನೆಹ್ವಾಲ್ ಅವರು ಮತ್ತೆ ನಂಬರ್ ಒನ್ ಪಟ್ಟ ಅಲಂಕರಿಸುವಂತಾಗಿದೆ.

ಇತ್ತೀಚಿಗೆ ಇಂಡಿಯಾ ಓಪನ್ ಸೂಪರ್ ಸರಣಿ ಬಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ಅವರು ವಿಶ್ವದ ನಂ.1 ಆಟಗಾರ್ತಿ ಎನಿಸಿದ್ದರು. ಈ ಪಟ್ಟಕ್ಕೇರಿದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಮ್ಮೆ ಹೊಂದಿದರು. ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ, ಕಾಮನ್ ವೆಲ್ತ್ ನಲ್ಲಿ ಚಿನ್ನದ ಪದಕ ಪಡೆದಿರುವ ಸೈನಾ ಅವರು ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT