ಕ್ರೀಡೆ

ಡೇರ್‍ಡೆವಿಲ್ಸ್ ಅಬ್ಬರಕ್ಕೆ ಮೋಡ ಸೇರಿದ ಸನ್

Srinivasamurthy VN

ವಿಶಾಖಪಟ್ಟಣ: ಪರಿಣಾಮಕಾರಿ ಆಲ್‍ರೌಂಡ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಮೂಲದ ಆಟಗಾರ, ನಾಯಕ ಜೀನ್ ಪಾಲ್ ಡುಮಿನಿ ನೆರವಿನಿಂದ ಡೆಲ್ಲಿ ಡೇರ್‍ಡೆವಿಲ್ಸ್ ತಂಡ 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಮತ್ತೊಂದು ವಿಜಯೋತ್ಸವ ಆಚರಿಸಿದೆ.

ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್, 4 ವಿಕೆಟ್‍ಗಳಿಂದ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಸದೆಬಡಿಯಿತು. ಡೆಲ್ಲಿ ಡೇರ್‍ಡೆವಿಲ್ಸ್ ಪಡೆ ಗೆಲ್ಲಲು ನೀಡಿದ್ದ 168 ರನ್‍ಗಳ ಗುರಿ ಬೆನ್ನಟ್ಟಿದ್ದ ಸನ್‍ರೈಸರ್ಸ್ ತಂಡಕ್ಕೆ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ಡೇವಿಡ್ ವಾರ್ನರ್ (28ರನ್, 20 ಎಸೆತ, 4 ಬೌಂಡರಿ) ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 50 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು.

ಮಧ್ಯಮ ಹಂತದಲ್ಲಿ ರವಿ ಬೊಪಾರ ಉಪಯುಕ್ತ 40 ರನ್‍ಗಳ ಕಾಣಿಕೆ ಕೊಡುವ ಮೂಲಕ ತಂಡದಲ್ಲಿ ಗೆಲವಿನ ಆಸೆ ಚಿಗುರಿಸಿದ್ದರು. ಆದರೆ, ಕೆಳಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲರಾದ ಕಾರಣ ಕೊನೆಯ ಓವರಿನಲ್ಲಿ ಸನ್‍ರೈಸರ್ಸ್ ಆಸೆ ಕಮರಿ ಹೋಗುವಂತಾಯಿತು. ಪ್ರಮುಖವಾಗಿ ಸ್ಪಿನ್ ಜಾದೂ ಪ್ರಓದರ್ಶಿಸಿದ ಡುಮಿನಿ, ತಮ್ಮ ಎರಡನೇ ಓವರಿನಲ್ಲಿ ಮೊದಲ ಮೂರು ಎಸೆತಗಳಲ್ಲಿ ಧವನ್ ಮತ್ತು ವಾರ್ನರ್ ಅವರನ್ನು ಹಾಗೂ ಮೂರನೇ ಓವರಿನಲ್ಲಿ ಕೊನೆಯ ಮೂರು ಎಸೆತಗಳಲ್ಲಿ ಬೊಪಾರ ಮತ್ತು ಆಯನ್ ಮೊರ್ಗನ್ ಈ ಬಹುಮೂಲ್ಯ ವಿಕೆಟ್‍ಗಳನ್ನು ಉರುಳಿಸಿದ್ದೇ ಸನ್‍ರೈಸರ್ಸ್‍ನ ಸೋಲಿನ ಹಣೆಬರಹ ಬರೆಯಲು ಕಾರಣವಾಯಿತು.

ಕೌಲ್ಟರ್ ಎಸೆದ ಅಂತಿಮ ಓವರಿನ ಕೊನೆಯ ಎರಡು ಎಸೆತಗಳಲ್ಲಿ ಸನ್‍ರೈಸರ್ಸ್ 7 ರನ್ ಗಳಿಸಬೇಕಿತ್ತು. ಆಗ ಐದನೇ ಎಸೆತವನ್ನು ಕರಣ್ ಶರ್ಮಾ, ಸಿಕ್ಸರ್ ಆಗುವಂತೆ ಚೆಂಡನ್ನು ದಂಡಿಸಿದ್ದರು. ಅಚ್ಚರಿ ಎಂದರೆ, ಬೌಂಡರಿ ಗೆರೆಯ ಬಳಿ ಇದ್ದ ಮಾಯಂಕ್ ಅಗರ್‍ವಾಲ್ ಮೇಲಕ್ಕೆ ಹಾರಿ ಅದನ್ನು ಕೈಯಿಂದ ಮೈದಾನದೊಳಕ್ಕೆ ನೀಡಿದ ಪರಿಣಾಮ ಕೇವಲ 2 ರನ್‍ಗಳು ಸಖಾತೆಗೆ ಸೇರುವಂತಾಯಿತು. ಪರಿಣಾಮ ಅಗರ್ವಾಲ್ ರ ಪ್ರಯತ್ನವೇ ಪ್ರಯತ್ನವೇ ಡೆಲ್ಲಿ ತಂಡಕ್ಕೆ ಗೆಲವು ತಂದುಕೊಟ್ಟಿತು ಎನ್ನಬಹುದು.

ಡೆಲ್ಲಿಗೆ ಡುಮಿನಿ-ಅಯ್ಯರ್ ಆಸರೆ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಡೇರ್‍ಡೆವಿಲ್ಸ್ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆರಂಬಿsಕ ಶ್ರೇಯಸ್ ಅಯ್ಯರ್ ಮತ್ತು ನಾಯಕ ಜೀನ್ ಪಾಲ್ ಡುಮಿನಿ ವೈಯಕ್ತಿಕ ಅರ್ಧಶತಕ ಗಳಿಸಿದ್ದಲ್ಲದೇ, ಎರಡನೇ ವಿಕೆಟ್ ಜೊತೆಯಾಟದಲ್ಲಿ 88 ರನ್ ಕಲೆಹಾಕಿ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ಅಯ್ಯರ್ ಕೇಲಸ 40 ಎಸೆತೆ ಗಳಲ್ಲಿ 3 ಬೌಂಡರಿ, 5 ಭರ್ಜರಿ ಸಿಕ್ಸರ್‍ಗಳಿದ್ದ 60 ರನ್ ಸಿಡಿಸಿದರೆ, ಡುಮಿನಿ 41 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸೇರಿದಂತೆ 54 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಮತ್ತೊಮ್ಮೆ ವಿಫಲರಾದರು. ಖಾತೆ ತೆರೆಯುವ ಮುನ್ನವೇ ಪ್ರವೀಣ್‍ಕುಮಾರ್ ಬೌಲಿಂಗ್‍ನಲ್ಲಿ ಬೊಪಾರ ಕ್ಯಾಚ್ ನೆಲಕ್ಕೆ ಹಾಕುವ ಮೂಲಕ ತಮಗೆ ನೀಡಿದ ಜೀವದಾನದ ಲಾಭ ಪಡೆಯಲು ವಿಫಲರಾದರು. ಸನ್ ರೈಸರ್ಸ್ ಹೈದರಾಬಾದ್ ಬೌಲರ್ ಗಳ ಪೈಕಿ ಯಾರೂ ಹೆಚ್ಚು ಪ್ರಭಾವ ಬೀರಲಿಲ್ಲ.

ಸ್ಕೋರ್ ವಿವರ
ಡೆಲ್ಲಿ ಡೇರ್‍ಡೆವಿಲ್ಸ್ 20 ಓವರುಗಳಲ್ಲಿ
4 ವಿಕೆಟ್‍ಗೆ 167
ಮಾಯಂಕ್ ಅಗರ್‍ವಾಲ್ ಸಿ ಧವನ್ ಬಿ ಭುವನೇಶ್ವರ್ 1, ಶ್ರೇಯಸ್ ಅಯ್ಯರ್ ಸಿ ವಾರ್ನರ್ ಬಿ ಪ್ರವೀಣ್‍ಕುಮಾರ್ 60, ಡುಮಿನಿ ಬಿ ಸ್ಟೇಯï್ನ 54, ಯುವರಾಜ್ ಸಿ ವಾರ್ನರ್ ಬಿ ರೆಡ್ಡಿ 9,
ಮ್ಯಾಥ್ಯೂಸ್ ಅಜೇಯ 15, ಜಾಧವ್ ಅಜೇಯ 19.
ಇತರೆ: (ಬೈ-1, ಲೆಗ್‍ಬೈ-2, ವೈ-6) 9.
ವಿಕೆಟ್ ಪತನ: 1-15, 2-93, 3-132, 4-132.
ಬೌಲಿಂಗ್ ವಿವರ: ಪ್ರವೀಣ್‍ಕುಮಾರ್ 4-0-38-1, ಸ್ಟೇಯ್ನ್ 4-0-27-1, ಭುವನೇಶ್ವರ 4-0-21-1, ಬೊಪಾರ 4-0-38-0, ಕರಣ್ 2-0-25-0, ಆಶಿಶ್ ರೆಡ್ಡಿ 2-0-15-1.

ಸನ್‍ರೈಸರ್ಸ್ ಹೈದರಾಬಾದ್

20 ಓವರುಗಳಲ್ಲಿ 8 ವಿಕೆಟ್‍ಗೆ 163
ವಾರ್ನರ್ ಸಿ ಅಂಡ್ ಬಿ ಡುಮಿನಿ 28, ಧವನ್ ಬಿ ಡುಮಿನಿ 18, ಬೊಪಾರ ಸಿ ತಿವಾರಿ ಬಿ ಡುಮಿನಿ 41, ಕೆ.ಎಲ್. ರಾಹುಲ್ ಬಿ ಮ್ಯಾಥ್ಯೂಸ್ 24, ನಮನ್ ಓಜಾ ಸಿ ಡುಮಿನಿ ಬಿ ತಾಹಿರ್ 12,
ಮೊರ್ಗನ್ ಬಿ ಡುಮಿನಿ 1, ಆಶಿಶ್ ರೆಡ್ಡಿ ರನೌಟ್ 15, ಕರಣ್ ಶರ್ಮಾ ಸಿ ಮ್ಯಾಥ್ಯೂಸ್ ಬಿ ಕೌಲ್ಟರ್ 19, ಪ್ರವೀಣ್‍ಕುಮಾರ್ ಅಜೇಯ 1.
ಇತರೆ: (ಬೈ-2, ಲೆಗ್‍ಬೈ-1, ವೈ-1) 4.
ವಿಕೆಟ್ ಪತನ: 1-50, 2-51, 3--89, 4--120,
5--128, 6--129, 7-159, 8-163.
ಬೌಲಿಂಗ್ ವಿವರ: ಕೌಲ್ಟರ್ ನೀಲ್ 4-0-26-1, ಡುಮಿನಿ 3-0-17-4, ಮುತ್ತುಸ್ವಾಮಿ 2-0-20-0, ಮ್ಯಾಥ್ಯೂಸ್ 4-0-39-1, ಇಮ್ರಾನ್ ತಾಹಿರ್ 4-0-35-1, ಅಮಿತ್ 2-0-14-0, ಯುವರಾಜ್ 1-0-10-0.
ಪಂದ್ಯಶ್ರೇಷ್ಠ: ಜೀನ್ ಪಾಲ್ ಡುಮಿನಿ

SCROLL FOR NEXT