ರಾಜ್ಯದ ಶರತ್ ಗಾಯಕ್ವಾಡ್ ಸೇರಿ 4 ಪ್ಯಾರಾ ಅಥ್ಲೀಟ್‍ಗಳಿಗೆ ಹೃತಿಕ್ ಸಹಾಯ ಹಸ್ತ 
ಕ್ರೀಡೆ

ರಾಜ್ಯದ ಶರತ್ ಗಾಯಕ್ವಾಡ್ ಸೇರಿ 4 ಪ್ಯಾರಾ ಅಥ್ಲೀಟ್‍ಗಳಿಗೆ ಹೃತಿಕ್ ಸಹಾಯ ಹಸ್ತ

ಮುಂದಿನ ವರ್ಷ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಪ್ಯಾರಾ ಅಥ್ಲೀಟ್ ಗಳ ನೆರವಿಗಾಗಿ ರು.20 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಮಾಡಿಕೊಡುವುದಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಭರವಸೆ ನೀಡಿದ್ದಾರೆ...

ನವದೆಹಲಿ: ಮುಂದಿನ ವರ್ಷ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಪ್ಯಾರಾ ಅಥ್ಲೀಟ್ ಗಳ ನೆರವಿಗಾಗಿ ರು.20 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಮಾಡಿಕೊಡುವುದಾಗಿ  ಬಾಲಿವುಡ್ ನಟ ಹೃತಿಕ್ ರೋಷನ್ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಪ್ಯಾರಾ ಅಥ್ಲೆಟಿಕ್ಸ್‍ನ ಮೂಲಸೌಕರ್ಯ ಹಾಗೂ ಆರ್ಥಿಕ ಸಮಸ್ಯೆ ಕುರಿತ ವರದಿಯನ್ನು ತಿಳಿದ ನಂತರ ಹೃತಿಕ್ ರೋಷನ್ ಈ  ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಈಜುಪಟುಗಳಾದ ಕರ್ನಾಟಕದ ಶರತ್ ಗಾಯಕ್ವಾಡ್ ಅಲ್ಲದೇ ನಿರಂಜನ್ ಮುಕುಂದನ್ ಮತ್ತು ಪವರ್  ಲಿಫ್ಟರ್‍ಗಳಾದ ರಾಜಿಂದರ್ ಸಿಂಗ್ ಮತ್ತು ಸಕಿನ ಖಾತುನ್ ಅವರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಪ್ಯಾರಾ ಅಥ್ಲೀಟ್‍ಗಳ ಸಮಸ್ಯೆ  ಕುರಿತು ಹೃತಿಕ್ ವರದಿ ನೋಡಿದ ನಂತರ, ತಮ್ಮ ಸ್ನೇಹಿತರನ್ನು ಸಂಪರ್ಕಿಸಿದ್ದಾರೆ. ಮತ್ತೊಬ್ಬ ನಟ ಕುನಾಲ್ ಕಪೂರ್ ಅಥ್ಲೀಟ್‍ಗಳ ನೆರವಿಗಾಆಗಿ  ದೇಣಿಗೆ ಸಂಗ್ರಹಿಸುವ ಸಂಸ್ಥೆಯನ್ನು ನಡೆಸುತ್ತಿದ್ದು, ಇವರ ಮೂಲಕ ಪ್ಯಾರಾ ಅಥ್ಲೀಟ್‍ಗಳಿಗೆ ನೆರವಾಗಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು  ಹೃತಿಕ್‍ನ ಆಪ್ತರು ತಿಳಿಸಿದ್ದಾರೆ.

ಪ್ರತಿ ಅಥ್ಲೀಟ್‍ಗಳು ತರಬೇತಿ, ಪ್ರಯಾಣ, ದೈಹಿಕ ತರಬೇತಿ, ಸಪ್ಲಿಮೆಂಟ್ಸ್, ಇತರೆ ಸಾಮಾಗ್ರಿ ಸೇರಿದಂತೆ ರು.5 ಲಕ್ಷ ವೆಚ್ಚ ತಗಲುತ್ತದೆ. ಹಾಗಾಗಿ  ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹೃತಿಕ್ ರು.20 ಲಕ್ಷ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಹಣದಿಂದ ಈ ಅಥ್ಲೀಟ್‍ಗಳು 2016ರ  ರಿಂಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದಟಛಿತೆ ನಡೆಸಲು ನೆರವಾಗುತ್ತದೆ ಎಂದರು. ಇತ್ತೀಚೆಗೆ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೀಟ್‍ಗಳಿಗೆ ಕಳಪೆ  ಸೌಕರ್ಯ ನೀಡಿದ ಕುರಿತು ವರದಿ ಓದಿದ್ದೆ. ನಂತರ ತೀವ್ರ ಬೇಸರವಾಯಿತು. ಹಾಗಾಗಿ ಅವರಿಗೆ ನೆರವು ನೀಡಬೇಕೆಂದು ನಿರ್ಧರಿಸಿದೆಎಂದು ಹೃತಿಕ್  ಸಾಮಾಜಿಕ ತಾಣದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್

ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೆ ಮಾತ್ರ ಗೊತ್ತು: ಮಾಜಿ CM ಸಿದ್ದರಾಮಯ್ಯ ಬೇಸರ

PM Modi Birthday: 'ಆತ್ಮೀಯ ಗೆಳೆಯ' ಮೋದಿಗೆ ಜಾರ್ಜಿಯಾ ಮೆಲೋನಿ ವಿಶೇಷ ವಿಶ್; ಇಟಲಿ ಪ್ರಧಾನಿಯಿಂದ ಹೃದಯಸ್ಪರ್ಶಿ ಸಂದೇಶ!

ಭಟ್ಕಳದಲ್ಲಿ ಮಸೀದಿ- ಮದರಸಾ ಮೇಲೆ ಅಷ್ಟೇ ಅಲ್ಲ, ಗಣೇಶ ಮೆರವಣಿಗೆ ಮೇಲೂ ಕಲ್ಲು ತೂರಾಟ: ಎರಡು ಪ್ರತ್ಯೇಕ FIR ದಾಖಲು