ಕೋಲ್ಕತಾ: ಕ್ರಿಕೆಟ್ ಆಡುವಾಗ ಮೈದಾನದಲ್ಲಿ ತಲೆಗೆ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದ ಕ್ರಿಕೆಟರ್ ರಾಹುಲ್ ಘೋಶ್ ಆರೋಗ್ಯ ಸ್ಥಿರವಾಗಿದ್ದು, ಇನ್ನು ಸಂಪೂರ್ಣವಾಗಿ ಅಪಾಯದಿಂದ ಪಾರಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಬಂಗಾಳ ತಂಡದ 19 ವರ್ಷದೊಳಗಿನ ತಂಡದ ಮಾಜಿ ನಾಯಕ ಅಂಕಿತ್ ಕೇಸರಿ ಅವರು ಮೈದಾನದ ವೇಳೆ ಸಹ ಆಟಗಾರನಿಗೆ ಡಿಕ್ಕಿ ಹೊಡೆದು, ಮೂರು ದಿನಗಳ ನಂತರ ಮೃತಪಟ್ಟ ಮರುದಿನವೇ, ರಾಹುಲ್ ಸಹ ಗಂಭೀರ ಗಾಯಗೊಂಡಿದ್ದಾರೆ.
ಮಂಗಳವಾರ ಈ ಘಟನೆ ಸಂಭವಿಸಿದ್ದು, ಅವರನ್ನು 7-9 ದಿನಗಳ ಕಾಲ ನಿಗಾ ಘಟಕದಲ್ಲಿ ಇರಿಸಲಾಗಿದೆ. ವೈದ್ಯರು ರಾಹುಲ್ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ. ಆದರೆ ಆತ ಅಪಾಯದಿಂದ ಸಂಪೂರ್ಣವಾಗಿ ಪಾರಾಗಿದ್ದಾನೆಯೇ ಎಂಬುದನ್ನು ಖಚಿತಪಡಿಸಿಲ್ಲ.