ನವದೆಹಲಿ: ಮೇ ತಿಂಗಳಲ್ಲಿ ಆರಂಭವಾಗಲಿರುವ ಜಪಾನ್ ವಿರುದ್ಧ ಹಾಕಿ ಸರಣಿಗೆ ಹಾಕಿ ಇಂಡಿಯಾ 24 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.
ಮೇ 3ರಿಂದ 9ರವರೆಗೆ ನಡೆಯಲಿರುವ ಹಾಕಿ ಟೂರ್ನಿಗಾಗಿ ಕೋಚ್ ಪಾಲ್ ವಾನ್ ಅಸ್ ನೇತೃತ್ವದಲ್ಲಿ 24 ಮಂದಿ ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸುಲ್ತಾನ್ ಅಜ್ಲಾನ್ ಶಾ ಟೂರ್ನಿಯಲ್ಲಿ ಭಾರತ 3ನೇ ಸ್ಥಾನವನ್ನು ಗಳಿಸಿದ್ದು. ಇದೇ ಯಶಸ್ಸಿನ ಹುಮ್ಮಸ್ಸಿನಲ್ಲಿ ಹಾಕಿ ಇಂಡಿಯಾ ಜಪಾನ್ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸಿದೆ.
ತಂಡದ ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಕೋಚ್ ಪಾಲ್ ವಾನ್ ಅಸ್ ಅವರು, ಪ್ರಸ್ತುತ ಜಪಾನ್ ವಿರುದ್ಧದ ಸರಣಿಗಾಗಿ ಉತ್ತಮ ತಂಡವನ್ನೇ ಕಟ್ಟಿದ್ದೇವೆ. ಭಾರತ ತಂಡ ಬಲಾಢ್ಯವಾಗಿದ್ದು, ತಂಡ ಸದಸ್ಯರು ತುಂಬಾ ಆತ್ಮ ವಿಶ್ವಾಸದಿಂದಿದ್ದಾರೆ. ಸುಲ್ತಾನ್ ಅಜ್ಲಾನ್ ಶಾ ಸರಣಿಯಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ತಮ್ಮ ಸಾಧನೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಇದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಿದೆ ಎಂದು ಅವರು ಹೇಳಿದರು.
ಹಾಕಿ ಇಂಡಿಯಾ ಪ್ರಕಟಿಸಿರುವ ತಂಡ ಇಂತಿದೆ.
ಪಿಆರ್ ಸ್ರೀಜೇಶ್, ಹರ್ಜೋತ್ ಸಿಂಗ್, ಗುರ್ಬಾಜ್ ಸಿಂಗ್, ರುಪೀಂದರ್ ಪಾಲ್ ಸಿಂಗ್, ಬಿರೇಂದರ್ ಲಕ್ರಾ, ಕೊತಜಿತ್ ಸಿಂಗ್, ವಿಆರ್ ರಘುನಾಥ್, ಜಸ್ಜಿತ್ ಸಿಂಗ್, ಗುರ್ಮಲ್ ಸಿಂಗ್, ಯುವರಾಜ್ ವಾಲ್ಮೀಕಿ, ಹರ್ಮನ್ ಪ್ರೀತ್ ಸಿಂಗ್, ಮನ್ ಪ್ರೀತ್ ಸಿಂಗ್, ಧರಮ್ ವೀರ್ ಸಿಂಗ್, ಸರ್ದಾರ್ ಸಿಂಗ್, ಎಸ್ ಕೆ ಉತ್ತಪ್ಪ, ಚಿಂಗ್ಲನ್ ಸನ ಸಿಂಗ್ ಕಂಗುಜಮ್, ಪರ್ದೀಪ್ ಮೊರ್, ಎಸ್ ವಿ ಸುನಿಲ್, ರಮಣ್ ದೀಪ್ ಸಿಂಗ್, ಆಕಾಶ್ ದೀಪ್ ಸಿಂಗ್, ಮನ್ ದೀಪ್ ಸಿಂಗ್, ನಿಕ್ಕಿನ್ ತಿಮ್ಮಯ್ಯ, ಸತ್ ಬೀರ್ ಸಿಂಗ್, ಲಲಿತ್ ಉಪಾಧ್ಯಾಯ್