ಪಾಟ್ನಾ: ಪ್ರಪಂಚ ಫಾರ್ಮ್ ನಲ್ಲಿರುವ ಯು ಮುಂಬಾ ಪ್ರೊ ಕಬ್ಬಡ್ಡಿ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ಸತತ ಏಳನೇ ಗೆಲುವು ದಾಖಲಿಸುವುದರೊಂದಿಗೆ ತನ್ನ ಜೈ ತ್ರಯಾತ್ರೆಯನ್ನು ಮುಂದುವರೆಸಿದೆ.
ಶನಿವಾರ ನಡೆದ ಟೂರ್ನಿಯ 25ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿಯನ್ನು 27-25 ಪಾಯಿಂಟ್ಸ್ ಗಳಿಂದ ಮಣಿಸಿದ ಅದು ಟೂರ್ನಿಯಲ್ಲಿ ಮತ್ತೊಮ್ಮೆ ಪಾರುಪತ್ಯ ಮೆರೆಯಿತು. ಆರಂಭದಿಂದಲೇ ಆಕ್ರಮಣಕಾರಿ ಹೋರಾಟ ನಡೆಸಿದ ದಬಾಂಗ್ ಡೆಲ್ಲಿ ಕೊನೆ ಕೊನೆಗೆ ಕಳಾಹೀನ ಪ್ರದರ್ಶನ ನೀಡಿ ಸೋಲಪ್ಪಿತು. ಮುಂಬಾ ಆಟಗಾರರು ತಮ್ಮ ಮೇಲಿನ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ಯಶ ಕಂಡರು.
ಒಟ್ಟು 7 ಪಾಯಿಂಟ್ಸ್ ಪಡೆದ ಭೂಪಿಂದರ್ ಸಿಂಗ್ ತಂಡದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಡೆಲ್ಲಿ ತಂಡದ ಪರವಾಗಿ ನಾಯಕ ರವೀಂದರ್ ಪಾಹಲ್ ಗರಿಷ್ಟ 9 ಪಾಯಿಂಟ್ಸ್ ಗಳೊಂದಿಗೆ ವಿಜೃಂಭಿಸಿದರು. ಪಾಟ್ನಾಕ್ಕೆ ತಂಡಕ್ಕೆ ಗೆಲುವು ನಾಯಕ ಸಂದೀಪ್ ನರ್ವಾಲ್ ಹಾಗೂ ರೈಡರ್ ರವಿ ದಲಾಲ್ ಅವರ ಮಿಂಚಿನ ಆಟದ ಫಲವಾಗಿ, ಶನಿವಾರ ನಡೆದ 2ನೇ ಪ್ರೊ ಕಬಡ್ಡಿ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ, ಪುನೇರಿ ಪಲ್ಟಾನ್ ತಂಡವನ್ನು 32-28 ಅಂತರದಿಂದ ಸೋಲಿಸಿತು.