ವಾಶಿಂಗ್ಟನ್: ಮೂರನೇ ಶ್ರೇಯಾಂಕಿತ ರೋಹನ್ ಬೋಪಣ್ಣ ಹಾಗೂ ಫ್ಲೋರಿನ್ ಮರ್ಜಿಯಾ ಜೋಡಿಯು ಸಿಟಿ ಓಪನ್ ಟೆನಿಸ್ ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಹೊರ ಬಿದ್ದಿದೆ.
ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿಯು, ಅಗ್ರಶೇಯಾಂಕಿತ ಜೋಡಿಯಾದ ಬಾಬ್ ಹಾಗೂ ಮೈಕ್ ಬ್ರಯಾನ್ ವಿರುದ್ಧ ಪರಾಭವಗೊಂಡಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಾಕ್ ಓವರ್ ಪಡೆದು ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶಿಸಿದ್ದ ಬೋಪಣ್ಣ ಜೋಡಿ, ಬ್ರಯಾನ್ ಸಹೋದರರ ವಿರುದ್ಧ 3-6, 4-6 ನೇರ ಸೆಟ್‍ಗಳ ಅಂತರದಲ್ಲಿ ಮುಖಭಂಗ ಅನುಭವಿಸಿತು. ಬ್ರಯಾನ್ ಬ್ರದರ್ಸ್ ತಮ್ಮ ಮುಂದಿನ ಪಂದ್ಯದಲ್ಲಿ ಮಾರ್ಸಿಲೊ ಮೆಲೊ ಮತ್ತು ಇವಾನ್ ಡೊಡಿಗ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.