ರೈಡಿಂಗ್ ವೇಳೆ ಅಂಕಗಳಿಸುವ ಪ್ರಯತ್ನದಲ್ಲಿ ಯು ಮುಂಬಾ ನಾಯಕ ಅನುಪ್ ಕುಮಾರ್ (ಮಧ್ಯದಲ್ಲಿ). 
ಕ್ರೀಡೆ

ಗೆಲುವಿನ ಲಯಕ್ಕೆ ಮರಳಿದ ಯು ಮುಂಬಾ

ಪಂದ್ಯದ ಆರಂಭದಿಂದ ಅಂತ್ಯದವರೆಗೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಬಿಗಿ ನಿಯಂತ್ರಣ ಸಾಧಿಸುವಲ್ಲಿ...

ನವದೆಹಲಿ: ಪಂದ್ಯದ ಆರಂಭದಿಂದ ಅಂತ್ಯದವರೆಗೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಬಿಗಿ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ.

ಭಾನುವಾರ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ 31-17 ಅಂಕಗಳ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ತಂಡ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲನುಭವಿಸಿದ ಪರಿಣಾಮ ತನ್ನ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತ್ತು.

ಈ ಪಂದ್ಯದಲ್ಲಿ ಮತ್ತೆ ತಮ್ಮ ಲಯ ಕಂಡುಕೊಂಡ ಯು ಮುಂಬಾ ತಂಡ ಜಯಿಸುವಲ್ಲಿ ಯಶಸ್ವಿಯಾ ಯಿತು. ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ರೈಡರ್‍ಗಳು ಮುಂಬೈ ತಂಡದ ರಕ್ಷಣ ವಿಭಾಗವನ್ನು ಸಮರ್ಥವಾಗಿ ಎದುರಿಸು ವಲ್ಲಿ ವಿಫಲವಾದ ಪರಿಣಾಮ ನಿರಾಸೆ ಅನುಭವಿಸಿತು.

ಪಂದ್ಯದ ಆರಂಭದಿಂದಲೇ ಬೆಂಗಾಲ್ ವಾರಿಯರ್ಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಮುಂಬೈ ಆಟಗಾರರು ಉತ್ತಮ ಅಂತರದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆರಂಭಿಕ ನಾಲ್ಕು ನಿಮಿಷ ದಲ್ಲಿ 2-1ರ ಅಂತರ ಕಾಯ್ದುಕೊಂಡಿದ್ದ ಮುಂಬೈ ಪಡೆ, 7 ನಿಮಿಷದ ವೇಳೆಗೆ 4-1ಕ್ಕೆ ಅಂತರ ಹೆಚ್ಚಿಸಿಕೊಂಡಿದ್ದರು. ಪಂದ್ಯದ 17ನೇ ನಿಮಿಷಕ್ಕೆ 10-5ರ ಮೇಲುಗೈ ಸಾಧಿಸಿತ್ತು. 19ನೇ ನಿಮಿಷದಲ್ಲಿ ವಾರಿಯರ್ಸ್ ಪಡೆಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಯು ಮುಂಬಾ ತಂಡ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 15-6 ಅಂಕಗಳ ಮೇಲುಗೈ ಸಾಧಿಸಿತ್ತು.

ಪಂದ್ಯದ ಎರಡನೇ ಅವಧಿಯ ಆರಂಭದಲ್ಲೂ ಯು ಮುಂಬಾ ತಂಡ ಉತ್ತಮ ಆರಂಭ ಪಡೆಯಿತು. ಪರಿಣಾಮ ಪಂದ್ಯದ 24ನೇ ನಿಮಿಷದಲ್ಲಿ 19-6ರಿಂದ 13 ಅಂಕಗಳ ಮುನ್ನಡೆ ಸಾಧಿಸಿತ್ತು. ಇನ್ನು ಅಂತಿಮ ಮೂರು ನಿಮಿಷಗಳ ಆಟದಲ್ಲಿ ಬೆಂಗಾಲ್ ವಾರಿಯರ್ಸ್ ಹೋರಾಟ ನಡೆಸುವ ಪ್ರಯತ್ನ ನಡೆಸಿತು. ಈ ವೇಳೆ ಎರಡನೇ ಬಾರಿಗೆ ಆಲೌಟ್ ಆದ ಪರಿಣಾಮ ತಂಡದ ಮುನ್ನಡೆಯನ್ನು 28-15ಕ್ಕೆ ಹೆಚ್ಚಿಸಿದರು. ಈ ಹಂತದಲ್ಲಿ ಸುಮಾರು 13 ಅಂಕಗಳ ಹಿನ್ನಡೆಯಲ್ಲಿದ್ದ ಬೆಂಗಾಲ್ ವಾರಿಯರ್ಸ್ ತಂಡ ತೀವ್ರ ಒತ್ತಡಕ್ಕೆ ಸಿಲುಕಿತು.

ಅಂತಿಮವಾಗಿ ಮುಂಬೈ 31-17 ಅಂಕಗಳ ಅಂತರದಿಂದ ಗೆಲವು ದಾಖಲಿಸಿತು.
ಡೆಲ್ಲಿಗೆ ಗೆಲುವು: ಎರಡನೇ ಪಂದ್ಯದಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ತಂಡ, ಪಾಟ್ನಾ ಪೈರೆಟ್ಸ್ ವಿರುದ್ಧ 45-26 ಅಂಕಗಳ ಅಂತರದಲ್ಲಿ ಜಯಿಸಿತು. ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಡೆಲ್ಲಿ ತಂಡ 19 ಅಂಕಗಳ ಅಂತರದಲ್ಲಿ ಜಯಿಸಿತು. ದಬಾಂಗ್ ಡೆಲ್ಲಿ ತಂಡದ ಪರ ಕಾಶಿಲಿಂಗ್ ಅಡಕೆ ಅತ್ಯುತ್ತಮ ಪ್ರದರ್ಶನ ನೀಡಿ 13 ಅಂಕಗಳನ್ನು ಗಳಿಸಿದ್ದಾರೆ. ಪಾಟ್ನಾ ತಂಡದ ಪರ ದೀಪಕ್ ನರ್ವಾಲ್ 7 ಅಂಕ ಗಳಿಸಿದ್ದು, ಗರಿಷ್ಠ ಮೊತ್ತಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT