ಕ್ರೀಡೆ

ಪ್ಯಾಂಥರ್ಸ್ ಗೆ ದಾಖಲೆ ಗೆಲುವು

ನವದೆಹಲಿ: ತಂಡದ ಪ್ರಮುಖ ಆಟಗಾರ ರಾಜೇಶ್ ನರ್ವಾಲ್ (15 ರೈಡಿಂಗ್ ಅಂಕ) ದಾಖಲೆಯ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ದಾಖಲೆ ಗೆಲವು ದಾಖಲಿಸಿದೆ.

ಸೋಮವಾರ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 51-21 ಅಂಕಗಳ ಅಂತರದಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ವಿರುದ್ಧ ಜಯ ಸಂಪಾದಿಸಿತು. ಈ ಪಂದ್ಯದಲ್ಲಿ 30 ಅಂಕಗಳ ಅಂತರದ ಗೆಲುವು ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ತಂಡ ಗಳಿಸಿದ ದಾಖಲೆಯ ಅಂತರದ ಗೆಲುವಾಗಿದೆ.

ಉಭಯ ತಂಡಗಳು ಅಂಕಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದುದರಿಂದ ಮೇಲುಗೈ ಸಾಧಿಸಲು ಗೆಲ್ಲಲೇಬೇಕಾದ ಒತ್ತಡ ಎದುರಾಗಿತ್ತು. ಆದರೆ, ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾ„ಸುವಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಯಶ ಕಂಡಿತು.

ಇನ್ನು ಪಂದ್ಯ ಶುರುವಾದ ಲಾಗಾಯ್ತಿನಿಂದಲೂ ತನ್ನ ರಕ್ಷಣಾತ್ಮಕ ವಿಭಾಗದ ಭದ್ರಕೋಟೆ ಹಾಗೂ ರೈಡರ್ ಗಳ ಚುರುಕಿನ ಪ್ರದರ್ಶನದ ನೆರವಿನಿಂದೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರಾಬಲ್ಯ ಮೆರೆಯಿತು. ಪಂಜ್ಯದ ಮೂರನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ನಂತರ 6ನೇ ನಿಮಿಷದ ವೇಳೆಗೆ 6-2ರ ಮುನ್ನಡೆ ಪಡೆದಿತ್ತು. ತಮ್ಮ ಬಿಗಿ ಹಿಡಿತವನ್ನು ಮುಂದುವರೆಸಿದ ಡೆಲ್ಲಿ ಆಟಗಾರರು ಪಂದ್ಯದ ಮೊದಲಾರ್ಧದ ವೇಳೆಗೆ 19-9ರಿಂದ 10 ಅಂಕಗಳ ಮುನ್ನಡೆ ಸಾಧಿಸಿದರು.

ಇನ್ನು ಪಂದ್ಯದ ದ್ವಿತಿಯಾರ್ಧದಲ್ಲೂ ಜೈಪುರ ತಂಡ ಉತ್ತಮ ಪ್ರದರ್ಶನ ಮುಂದುವರೆಸಿತು. 21ನೇ ನಿಮಿಷದಲ್ಲಿ ಎರಡನೇ ಬಾರಿಗೆ ಆಲೌಟ್ ಆದ ಡೆಲ್ಲಿ ತಂಡ 9-22 ಅಂಕಘಲ ಅಂತರದಲ್ಲಿ ಹಿನ್ನಡೆ ಅನುಭವಿಸಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಆತಿಥೇಯ ಡೆಲ್ಲಿ ತಂಡ ಒಟ್ಟು 4 ಬಾರಿ ಆಲೌಟ್ ಆಗಿ ಹಿನ್ನಡೆ ಅನುಭವಿಸಿತು.

SCROLL FOR NEXT