ಲಂಡನ್: ಮಾರಕ ವೇಗದ ದಾಳಿಯಿಂದ ಇಂಗ್ಲೆಂಡ್ ಬ್ಯಾಟ್ಸ್‍ಮನ್‍ಗಳನ್ನು ಕಾಡಿದ ಆಸ್ಟ್ರೇಲಿಯಾ ತಂಡ ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಗೆಲವು ದಾಖಲಿಸಿದೆ. ಆ ಮೂಲಕ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಮೈಕೆಲ್ ಕ್ಲಾರ್ಕ್ ಗೆಲುವಿನ ಸಿಹಿಯೊಂದಿಗೆ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಭಾನುವಾರ ಕಿಂಗ್ಸ್‍ಸ್ಟನ್ ಓವಲ್ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇನಿಂಗ್ಸ್ ಹಾಗೂ 46 ರನ್‍ಗಳ ಗೆಲವು ದಾಖಲಿಸಿತು. ಈ ಮೂಲಕ ಆ್ಯಶಸ್ ಸರಣಿ ಸೋಲಿನ ಅಂತರವನ್ನು 32ಕ್ಕೆ ಇಳಿಸಿಕೊಂಡಿತು. ಪಂದ್ಯದ ಮೊದಲ ಇನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ ತಂಡ 481 ರನ್‍ಗಳ ಬೃಹತ್ ಮೊತ್ತ ಪೇರಿಸಿತ್ತು. ನಂತರ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‍ನಲ್ಲಿ 149 ರನ್ ಗಳಿಗೆ ಆಲೌಟ್ ಮಾಡಿದ ಕಾಂಗರೂ ಪಡೆ, ಫಾಲೋ ಆನ್ ಹೇರುವ ಮೂಲಕ ಒತ್ತಡಕ್ಕೆ ಸಿಲುಕಿಸಿತು.
ಎರಡನೇ ಇನಿಂಗ್ಸ್‍ನಲ್ಲೂ ಆತಿಥೇಯ ಪಡೆಯನ್ನು 286 ರನ್‍ಗಳಿಗೆ ಆಲೌಟ್ ಮಾಡುವ ಮೂಲಕ ಪಂದ್ಯದಲ್ಲಿ ಗೆಲವು ದಾಖಲಿಸಿತು. ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯಕ್ಕೆ 8 ವಿಕೆಟ್‍ಗೆ 258 ರನ್ ದಾಖಲಿಸಿದ್ದ ಇಂಗ್ಲೆಂಡ್, ಅಂತಿಮ ದಿನದಾಟದಲ್ಲಿ 28 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ 481
ಇಂಗ್ಲೆಂಡ್ ಮೊದಲ ಇನಿಂಗ್ಸ್ 149
ಇಂಗ್ಲೆಂಡ್ ಎರಡನೇ ಇನಿಂಗ್ಸ್ 101.4 ಓವರ್‍ಗಳಲ್ಲಿ 286 (ಅಲಿ 35, ಬ್ರಾಡ್ 11, ಸಿಡ್ಲ್ 35ಕ್ಕೆ4) ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್
ಸರಣಿ ಶ್ರೇಷ್ಠ: ಕ್ರಿಸ್ ರೋಜರ್ಸ್