ಕ್ರೀಡೆ

ಬೋಲ್ಟ್ ಗೆ ಭೀತಿ ಹುಟ್ಟಿಸಿದ ಗ್ಯಾಟ್ಲಿನ್

Srinivasamurthy VN

ಬೀಜಿಂಗ್: ಪುರುಷರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವ ಶರವೇಗಿ ಉಸೇನ್ ಬೋಲ್ಟ್ ಗೆ ಪ್ರಬಲ ಪೈಫೋಟಿ ಒಡ್ಡುವ ಕುರುಹನ್ನು ಅಮೆರಿಕ ಸ್ಪ್ರಿಂಟರ್ ಜಸ್ಟಿನ್ ಗ್ಯಾಟ್ಲಿನ್ ತೋರಿದ್ದಾರೆ.

ಬುಧವಾರ ನಡೆದ ಸೆಮಿಫೈನಲ್‍ನಲ್ಲಿ ಉಸೇನ್ ಬೋಲ್ಟ್ 19.95 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ಗ್ಯಾಟ್ಲಿನ್ 19.87 ಸೆ.ಗಳಲ್ಲಿ ಗಮ್ಯ ಸ್ಥಾನ ತಲುಪಿ ಮಿಂಚು ಹರಿಸಿದರು. ಗಳವಾರವಷ್ಟೇ ನಡೆದಿದ್ದ ಮೊದಲ ಹೀಟ್ಸ್‍ನಲ್ಲಿ ಉಸೇನ್ ಬೋಲ್ಟ್ 20.28 ಸೆಕೆಂಡುಗಳನ್ನು ತೆಗೆದುಕೊಂಡರೆ, ಜಸ್ಟಿನ್ ಗ್ಯಾಟ್ಲಿನ್ 20.19 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಅಂದಹಾಗೆ ಗುರುವಾರ ನಡೆಯಲಿರುವ ಫೈನಲ್‍ನಲ್ಲಿ ಈ ಈರ್ವರ ನಡುವಿನ ರೇಸ್ ಇನ್ನಷ್ಟು ರೋಚಕತೆ ಪಡೆಯುವ ಸಾಧ್ಯತೆ ಇದೆ. 2009ರ ಬರ್ಲಿನ್ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 19.19 ಸೆಕೆಂಡ್ ಗಳಲ್ಲಿ ಗುರಿ ತಲುಪಿದ ಉಸೇನ್ ಬೋಲ್ಟ್ ಅವರ 200 ಮೀ ವೇಗದ ಸಾಧನೆ ವಿಶ್ವದಾಖಲೆ ಎನಿಸಿರುವುದು ವಿಶೇಷ.

SCROLL FOR NEXT