ಕ್ರೀಡೆ

ರಿಯೋಗೆ ಟಿಂಟು

Srinivasamurthy VN

ಬೀಜಿಂಗ್: ಸರಾಂತ ಓಟಗಾರ್ತಿ ಟಿಂಟು ಲೂಕಾ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಸ್ಪರ್ಧಾವಳಿಯ ಮಹಿಳೆಯರ 800 ಮೀಟರ್ ಓಟದ ಸ್ಪರ್ಧೆಯಲ್ಲಿ 7ನೇ ಸ್ಥಾನಕ್ಕೆ ಕುಸಿದು ತೀವ್ರ ನಿರಾಸೆ ಅನುಭವಿಸಿದರಾದರೂ, ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದು ಸಮಾಧಾನಗೊಂಡಿದ್ದಾರೆ.

ಬುಧವಾರ ಇಲ್ಲಿನ ಬರ್ಡ್ ನೆಸ್ಟ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 8 ಮಂದಿ ಅಥ್ಲೀಟ್‍ಗಳ ಪೈಕಿ ಟಿಂಟು ಕೊನೆಯ ಎರಡನೇ ಸ್ಥಾನ ಪಡೆದು ಸೆಮಿಫೈನಲ್ ತಲುಪಲು ವಿಫಲವಾದರು. ಆದರೆ 2 ನಿಮಿಷ 0.95 ಸೆ.ಗಳಲ್ಲಿ ಗುರಿಮುಟ್ಟಿದ ಟಿಂಟು ಲೂಕಾ ಈ ಋತುವಿನಲ್ಲೇ ಶ್ರೇಷ್ಠ ಸಾಧನೆ ಮಾಡಿದರು. ಇದು ಅವರನ್ನು ರಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆಯುವಲ್ಲಿ ನೆರವಿಗೆ ಬಂದಿತು. ಐದು ವರ್ಷಗಳ ಹಿಂದೆ ಕ್ರೊವೇಷಿಯಾದ ಸ್ಪಿಲ್ಟ್‍ನಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಒಂದು ನಿಮಿಷ 59.17 ಸೆ.ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದ ಲೂಕಾ, ಮೊದಲ 400 ಮೀಟರ್ ಓಟವನ್ನು 57.06 ಸೆ.ಗಳಲ್ಲಿ ಕ್ರಮಿಸಿ ಭರವಸೆ ಮೂಡಿಸಿದ್ದರು.

ಆದರೆ ಕ್ರಮೇಣ ಆಕೆಯ ವೇಗದ ಗತಿ ಕ್ಷೀಣವಾಯಿತು. ಇನ್ನು ಈ ವಿಭಾಗದ ಮೊದಲ ಸುತ್ತಿನ ರೇಸ್‍ನಲ್ಲಿ ಬೆಲಾರಸ್‍ನ ಮರಿನಾ ಅರ್ಜಮಸೋವಾ (1:58.69 ಸೆ.) ಗರಿಷ್ಠ
ವೇಗದೊಂದಿಗೆ ಸೆಮಿಫೈನಲ್‍ಗೆ ಅರ್ಹತೆ ಪಡೆದರು. ಇನ್ನು 1:59.67 ಸೆ.ಗಳಲ್ಲಿ ಗುರಿ ತಲುಪಿದ ಹಾಲಿ ಚಾಂಪಿಯನ್ ಕೀನ್ಯಾದ ಯುನಿಸಿ ಜೆಪೊ್ಕಯಿಚ್ ಸುಮ್ ಕೂಡ ಫೈನಲ್‍ಗೆ
ಪ್ರವೇಶ ಪಡೆಯುವಲ್ಲಿ ಸಫಲರಾದರು.

ಲಲಿತಾಗೂ ನಿರಾಸೆ
ಏತನ್ಮಧ್ಯೆ ಮಹಿಳೆಯರ 3000 ಸ್ಟೀಪಲ್‍ಚೇಸ್‍ನಲ್ಲಿ ಫೈನಲ್ ತಲುಪಿ ಗಮನ ಸೆಳೆದಿದ್ದ ಭಾರತದ ಲಲಿತಾ ಬಬರ್ ಬುಧವಾರ ನಡೆದ ಫೈನಲ್ ನಲ್ಲಿ 8ನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರು. ಇದಕ್ಕೂ ಮುನ್ನ ನಡೆದಿದ್ದ ಹೀಟ್ಸ್ ನಲ್ಲಿ 9:27.19 ಸೆ.ಗಳಲ್ಲಿ ಗುರಿ ತಲುಪಿ 8ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದ ಲಲಿತಾ, ಫೈನಲ್ ನಲ್ಲಿ ಅಗ್ರ 3 ಸ್ಥಾನಗಳಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾದರು. ನಿಗದಿತ ದೂರವನ್ನು 9:29.64 ಸೆ. ಅವಧಿಯಲ್ಲಿ ಮುಟ್ಟಿದ ಅವರು, ಪದಕ ವಂಚಿತರಾದರು. ಕೀನ್ಯಾದ ಹಿವಿನ್ ಕಿಯೆಂಗ್ (9.19.11 ¸.ಸೆ) ಸ್ವರ್ಣ ಗೆದ್ದರೆ, ಟುನಿಶಿಯಾದ ಹಬೀಬಾ (9:19.24 ಸೆ.) ಬೆಳ್ಳಿ, ಜರ್ಮನಿಯ ಜೆಸಾ (9:19.25 ¸ಸೆ ) ಕಂಚಿನ ಗೌರವಪಡೆದರು.

SCROLL FOR NEXT