ಜಮೈಕನ್ ಸ್ಪ್ರಿಂಟರ್ ಉಸೇನ್ ಬೋಲ್ಟ್ (ಸಂಗ್ರಹ ಚಿತ್ರ) 
ಕ್ರೀಡೆ

ಬೋಲ್ಟ್ ಬೆಸ್ಟ್!

ಜಗತ್ತಿಗೊಬ್ಬನೇ ವೇಗಿ ಎಂಬಂತೆ ಸತತ 7 ವರ್ಷಗಳಿಂದ ಚಾಂಪಿಯನ್ ಪಟ್ಟವನ್ನು ಬಿಟ್ಟುಕೊಡದೆ ವಿಜೃಂಭಿಸುತ್ತಿರುವ ವಿಶ್ವ ಶರವೇಗಿ, ಜಮೈಕನ್ ಸ್ಪ್ರಿಂಟರ್ ಉಸೇನ್ ಬೋಲ್ಟ್ ಚೀನಾ ರಾಜಧಾನಿ ಬೀಜಿಂಗ್‍ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಎರಡನೇ...

ಬೀಜಿಂಗ್: ಜಗತ್ತಿಗೊಬ್ಬನೇ ವೇಗಿ ಎಂಬಂತೆ ಸತತ 7 ವರ್ಷಗಳಿಂದ ಚಾಂಪಿಯನ್ ಪಟ್ಟವನ್ನು ಬಿಟ್ಟುಕೊಡದೆ ವಿಜೃಂಭಿಸುತ್ತಿರುವ ವಿಶ್ವ ಶರವೇಗಿ, ಜಮೈಕನ್ ಸ್ಪ್ರಿಂಟರ್ ಉಸೇನ್ ಬೋಲ್ಟ್ ಚೀನಾ ರಾಜಧಾನಿ ಬೀಜಿಂಗ್‍ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಎರಡನೇ ಸ್ವರ್ಣ ಪದಕ ಜಯಿಸಿದ್ದಾರೆ.

ಗುರುವಾರ ಬರ್ಡ್ ನೆಸ್ಟ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪುರುಷರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಬೋಲ್ಟ್ (19.55 ಸೆ.) ತನ್ನ ಸಮೀಪದ ಪ್ರತಿಸ್ಪರ್ಧಿ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ (19.74 ಸೆ.) ಅವರನ್ನು ಮಣಿಸಿದರು. ಇದರೊಂದಿಗೆ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ 10ನೇ ಸ್ವರ್ಣ ಪದಕ ಗೆದ್ದ ಹಿರಿಮೆಗೆ ಭಾಜನರಾದರಲ್ಲದೆ, 200 ಮೀಟರ್ ವಿಭಾಗದಲ್ಲಿ 4ನೇ ಚಿನ್ನ ಗೆದ್ದು ಚರಿತ್ರೆ ನಿರ್ಮಿಸಿದರು.

ಇನ್ನುಳಿದಂತೆ ಈ ವಿಭಾಗದಲ್ಲಿ ದ.ಆಫ್ರಿಕಾದ ಜೊಬೊಡ್ವಾನ (20.01 ಸೆ.) ಕಂಚಿನ ಪದಕಕ್ಕೆ ತೃಪ್ತರಾದರು. ಬರೋಬ್ಬರಿ 7 ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ 2008ರ ಒಲಿಂಪಿಕ್ಸ್‍ನಲ್ಲಿ ಟ್ರಿಪಲ್ (100, 200 ಹಾಗೂ 4/100) ಚಾಂಪಿಯನ್ ಎನಿಸಿದ್ದ ಬೋಲ್ಟ್ ನಾಲ್ಕು ವರ್ಷಗಳ ಬಳಿಕ ನಡೆದ 2012ರ ಲಂಡನ್ ಒಲಿಂಪಿಕ್ಸ್‍ನಲ್ಲಿಯೂ ಟ್ರಿಪಲ್ ಚಾಂಪಿಯನ್ ಪಟ್ಟಧಾರಿಯಾಗಿದ್ದರು. ವಾಸ್ತವವಾಗಿ ಗುರುವಾರದ ಈ 200 ಮೀಟರ್ ಓಟದ ಸ್ಪರ್ಧೆಯನ್ನು ಬೋಲ್ಟ್ ಹಾಗೂ ಗ್ಯಾಟ್ಲಿನ್ ನಡುವಣದ ಮರು ಸೆಣಸೋಟ ಎಂದೇ ಬಿಂಬಿಸಲಾಗಿತ್ತು. ಏಕೆಂದರೆ, 100 ಮೀಟರ್ ಓಟದಲ್ಲಿ ಕೇವಲ ಒಂದು ಸೆಕೆಂಡಿನ ಅಂತರದಿಂದ ಚಿನ್ನ ಕಳೆದುಕೊಂಡಿದ್ದ ಗ್ಯಾಟ್ಲಿನ್, ಬಳಿಕ ನಡೆದ 200 ಮೀಟರ್ ಓಟದ ಹೀಟ್ಸ್ ಹಾಗೂ ಸೆಮಿಫೈನಲ್‍ಗಳೆರಡರಲ್ಲೂ ಬೋಲ್ಟ್‍ಗೆ ಸೆಡ್ಡು ಹೊಡೆದಿದ್ದರು. ಆದರೆ ಫೈನಲ್‍ನಲ್ಲಿನ ಚಿತ್ರಣ ಮಾತ್ರ ಸಂಪೂರ್ಣ ಬದಲಾಯಿತು. ಓಟ ಆರಂಭವಾದ ಮೊದಲ 20 ಮೀಟರ್‍ಗಳಲ್ಲೇ ಬೋಲ್ಟ್ ತಾನೇ ಚಾಂಪಿಯನ್ ಎನ್ನುವುದನ್ನು ನಿಶ್ಚಯಿಸಿಬಿಟ್ಟರು.

ಕಣ್ಣ ರೆಪ್ಪೆ ಬಡಿತವನ್ನೇ ನಾಚಿಸುವಂತೆ ಮಿಂಚಿನ ವೇಗದೊಂದಿಗೆ ದೌಡಾಯಿಸಿದ ಬೋಲ್ಟ್, ಕ್ರೀಡಾಂಗಣದಲ್ಲಿ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. 29 ವರ್ಷದ ಬೋಲ್ಟ್ 2017ರ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ನಂತರ ನಿವೃತ್ತಿ ಹೇಳಲು ನಿರ್ಧರಿಸಿದ್ದು, ಅದಕ್ಕೂ ಮುಂದಿನ ರಿಯೋ ಒಲಿಂಪಿಕ್ಸ್‍ನಲ್ಲಿಯೂ ಚಾಂಪಿಯನ್ ಆಗಲು ತುಡಿಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT