ನ್ಯೂಯಾರ್ಕ್: ಕಾಲಿನ ಗಾಯದ ಸಮಸ್ಯೆಗೆ ಸಿಲುಕಿರುವ ಮೂರನೇ ಶ್ರೇಯಾಂಕಿತೆ ರಷ್ಯಾದ ಮರಿಯಾ ಶರಪೋವಾ ವರ್ಷದ ಕಡೆಯ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿ ಯುಎಸ್ ಓಪನ್‍ನಿಂದ ಹಿಂದೆ ಸರಿದಿದ್ದಾರೆ.
``ದುರಾದೃಷ್ಟವಶಾತ್ ಪ್ರಸಕ್ತ ಸಾಲಿನ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಟೂರ್ನಿಯ ಆರಂಭಕ್ಕೂ ಮುನ್ನ ಸಂಪೂರ್ಣವಾಗಿ ಸಜ್ಜಾಗಲು ಸಕಲ ಪ್ರಯತ್ನ ನಡೆಸಿದೆನಾದರೂ ಅದು ಸಾಧ್ಯವಾಗಲಿಲ್ಲ. ಮುಂದಿನ ಕೆಲವು ವಾರಗಳ ನಂತರ ಏಷ್ಯಾದ ಟೂರ್ನಿಗಳಲ್ಲಿ ಭಾಗವಹಿಸಲಿದ್ದೇನೆ. ಈ ವರ್ಷವನ್ನು ಉತ್ತಮವಾಗಿ ಆರೋಗ್ಯಕರವಾಗಿ ಅಂತ್ಯಗೊಳಿಸಲು ಇಚ್ಛಿಸುತ್ತೇನೆ'' ಎಂದು ಶರಪೋವಾ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.