ವಿರಾಟ್ ಕೊಹ್ಲಿ -ಅಜಿಂಕ್ಯ ರೆಹಾನೆ 
ಕ್ರೀಡೆ

ಕೊಹ್ಲಿ-ರಹಾನೆ ಶತಕದ ಜತೆಯಾಟ

ಬೆಳಗಿನ ಅವಧಿಯಲ್ಲಿ ಕಂಡುಬಂದ ಪ್ರವಾಸಿ ತಂಡದ ಬೌಲಿಂಗ್ ಮೊನಚು ಕ್ರಮೇಣ ಕ್ಷೀಣಿಸಲಾಗಿ ಆತಿಥೇಯ ಭಾರತ ತಂಡ ಹರಿಣಗಳ ವಿರುದ್ಧದ...

ನವದೆಹಲಿ: ಬೆಳಗಿನ ಅವಧಿಯಲ್ಲಿ ಕಂಡುಬಂದ ಪ್ರವಾಸಿ ತಂಡದ  ಬೌಲಿಂಗ್ ಮೊನಚು ಕ್ರಮೇಣ ಕ್ಷೀಣಿಸಲಾಗಿ ಆತಿಥೇಯ ಭಾರತ ತಂಡ ಹರಿಣಗಳ ವಿರುದ್ಧದ ಕೊನೆಯ ಹಾಗೂ ಅಂತಿಮ ಟೆಸ್ಟ್‍ನ ಮೂರನೇ ದಿನದಂದೂ ಪ್ರಾಬಲ್ಯ ಮೆರೆದರೆ, ಇನ್ನೊಂದೆಡೆ ಪ್ರತಿಷ್ಠಿತ ಫ್ರೀಡಂ ಟ್ರೋಫಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಆಟ ನಿಂತಾಗ ಭಾರತ ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ 81 ಓವರ್‍ಗಳಲ್ಲಿ 4 ವಿಕೆಟ್‍ಗೆ 190 ರನ್ ಗಳಿಸಿದ್ದು ಅದರೊಂದಿಗೆ 4-03 ರನ್ ಭಾರೀ ಮುನ್ನಡೆ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 83 ಮತ್ತು 52 ರನ್ ಗಳಿಸಿ ಕ್ರೀಸ್‍ನಲ್ಲಿದ್ದಾರೆ.
ಈ ಬೃಹತ್ ಮೊತ್ತಕ್ಕೇ ಭಾರತ ಇನ್ನಿಂಗ್ಸ್ ಡಿಕ್ಲೇರ್  ಮಾಡಿಕೊಂಡು 3-0 ಅಂತರದ ಗೆಲುವಿಗೆ ವೇದಿಕೆ  ಸಜ್ಜುಮಾಡಿಕೊಳ್ಳುತ್ತದೋ ಇಲ್ಲ, ಇನ್ನಷ್ಟು ರನ್ ಕಲೆಹಾಕಲು ಆದ್ಯತೆ ನೀಡುತ್ತದೋ ಎಂಬುದು ಬೆಳಗಿನ ಪಿಚ್‍ನ ಸ್ಥಿತಿಗತಿಯನ್ನು ಅವಲಂಬಿಸಿದೆ. ಒಂದೊಮ್ಮೆ ಭಾರತಕ್ಕೆ ದಿಟ್ಟ ಪೈಪೋಟಿಯನ್ನು ದ.ಆಫ್ರಿಕಾ ನೀಡಿದ್ದೇ ಆದಲ್ಲಿ ಪಂದ್ಯ ಐದನೇ ದಿನಕ್ಕೆ  ಕಾಲಿಟ್ಟರೂ ಅಚ್ಚರಿಯಿಲ್ಲ. ಆದರೆ, ಈಗಾಗಲೇ ಆತಿಥೇಯರ ಬೌಲಿಂಗ್‍ಗೆ ಅದರಲ್ಲೂ ಸ್ಪಿನ್ ಸುಳಿಯಲ್ಲಿ ಒದ್ದಾಡುತ್ತಿರುವ ದ.ಆಫ್ರಿಕಾಗೆ ಸ್ವತಃ ಪುಟಿದೆದ್ದು ನಿಲ್ಲುವ ವಿಶ್ವಾಸವೇ ಇಲ್ಲದಂತಾಗಿದೆ. ಆದಾಗ್ಯೂ ಪ್ರವಾಸಿಗರ ತಿರುಗುಬೀಳುವಿಕೆಯ ಸಾಮಥ್ರ್ಯವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಹೀಗಾಗಿ ಕೊಹ್ಲಿ ಬಳಗ ತನ್ನ ಎಚ್ಚರಿಕೆಯಲ್ಲಿ ತಾನಿರಲು ನಿರ್ಧರಿಸಿದೆ.
ಭೀತಿ ಹುಟ್ಟಿಸಿದ ಮಾರ್ಕೆಲ್: ಇನ್ನು ಪಂದ್ಯದ ಎರಡನೇ ದಿನದಂದು ಪ್ರವಾಸಿ ತಂಡವನ್ನು 121 ರನ್ ಗಳಿಗೆ ನಿಯಂತ್ರಿಸಿ 213 ರನ್‍ಗಳ ಇನ್ನಿಂಗ್ಸ್ ಮುನ್ನಡೆ ಪಡೆದ ಭಾರತ, ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿ  ಆಘಾತಕ್ಕೀಡಾಯಿತು. ವೇಗಿ ಮಾರ್ನಿ ಮಾರ್ಕೆಲ್ ಅವರ ನಿಖರ ಬೌಲಿಂಗ್‍ಗೆ ತತ್ತರಿಸಿದ ಭಾರತ ಒಂದರ ಹಿಂದೊಂದರಂತೆ ವಿಕೆಟ್ ಕಳೆದುಕೊಂಡು ಕಳೆಗುಂದಿತು. ಇನ್ನಿಂಗ್ಸ್‍ನ 5ನೇ ಓವರ್‍ನ ಕೊನೇ ಎಸೆತದಲ್ಲಿ ಆರಂಭಿಕ ಮುರಳಿ ವಿಜಯ್  (3) ವಿಕೆಟ್‍ಕೀಪರ್ ಡೇನ್ ವಿಲಾಸ್‍ಗೆ ಕ್ಯಾಚಿತ್ತು ನಿರ್ಗಮಿಸಿದರೆ, ಬಳಿಕ ಬಂದ ರೋಹಿತ್ ಶರ್ಮಾ (0)ರನ್ನು ಮಾರ್ಕೆಲ್ ಬೌಲ್ಡ್ ಮಾಡಿ ಆಘಾತ ನೀಡಿದರು. ಹೀಗೆ 8 ರನ್‍ಗೆ ಕೇವಲ 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಚೇತೇಶ್ವರ ಪೂಜಾರ (28) ಮತ್ತು ಶಿಖರ್ ಧವನ್ (21) ಭೋಜನವಿರಾಮದ ತನಕ 45 ರನ್ ಜತೆಯಾಟವಾಡಿ ಪರಿಸ್ಥಿತಿ  ನಿಭಾಯಿಸಿದರು. ಆದರೆ, ವಿರಾಮದ ನಂತರ ಮತ್ತೆ ಎರಗಿದ ಮಾರ್ಕೆಲ್, ಧವನ್ ಅವರನ್ನು ಬೌಲ್ಡ್  ಮಾಡಿದರು. ಅವರು ನಿರ್ಗಮಿಸಿದ ಅನತಿ ಅಂತರದಲ್ಲೇ ಪೂಜಾರ ಸ್ಪಿನ್ನರ್ ಇಮ್ರಾನ್ ತಾಹಿರ್ ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು.
ಕೊಹ್ಲಿ-ರಹಾನೆ ಮಿಂಚು: ಈ ಹಂತದಲ್ಲಿ ಜತೆಯಾದ ಕೊಹ್ಲಿ ಮತ್ತು ರಹಾನೆ ದ.ಆಫ್ರಿಕಾ ಬೌಲರ್‍ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದರು. ಮೊದಲ ಬಾರಿಗೆ ಸರಣಿಯಲ್ಲಿ ಸ್ಥಿರ ಆಟ ಪ್ರದರ್ಶಿಸಿದ ಕೊಹ್ಲಿ ಮೊದಲ ಇನ್ನಿಂಗ್ಸ್‍ನಲ್ಲಿ  ಭರ್ಜರಿ ಶತಕ ದಾಖಲಿಸಿದ್ದ ರಹಾನೆಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ ಮುರಿಯದ 133 ರನ್‍ಗಳನ್ನು ಕಲೆಹಾಕುವ ಮೂಲಕ ದಿನದ ಆರಂಭದಲ್ಲಿ ಹರಿಣಗಳು ಗಳಿಸಿದ್ದ ಮೇಲುಗೈ ಅನ್ನು ಮೆಟ್ಟಿನಿಂತರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT