ಮೈಸೂರು: ಪ್ರವಾಸಿ ಮುಂಬೈ ತಂಡದ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಕರ್ನಾಟಕ ತಂಡ 19 ವರ್ಷದೊಳಗಿನವರ ಕೂಚ್ ಬೆಹಾರ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.
ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಮುಂಬೈ, ಆತಿಥೇಯ ಕರ್ನಾಟಕ ವಿರುದ್ಧ ಇನಿಂಗ್ಸ್ ಹಾಗೂ 129 ರನ್‍ಗಳ ಅಂತರದ ಭರ್ಜರಿ ಜಯ ಪಡೆಯಿತು. ಸೋಮವಾರ ದಿನಾಂತ್ಯಕ್ಕೆ 161 ರನ್ ಗಳಿಗೆ 4 ವಿಕೆಟ್‍ನೊಂದಿಗೆ ಮಂಗಳವಾರ ದಿನದಾಟ ಆರಂಭಿಸಿದ ಕರ್ನಾಟಕ, 56 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್ 180
ಮುಂಬೈ ಮೊದಲ ಇನಿಂಗ್ಸ್ 506 (ಡಿಕ್ಲೇರ್)
ಕರ್ನಾಟಕ ದ್ವಿತೀಯ ಇನಿಂಗ್ಸ್ 197 (121.1 ಓವರ್)
(ನಿಕಿನ್ ಜೋಸ್ 73, ವಿಷ್ಣು ಪ್ರಿಯನ್
46; ಮಿನಾದ್ 59ಕ್ಕೆ 4, ಮುಲಾನಿ 42ಕ್ಕೆ 4)