ನವದೆಹಲಿ: ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಪ್ರೋ ಕುಸ್ತಿ ಲೀಗ್ನ ಯುಪಿ ವಾರಿಯರ್ಸ್ ತಂಡದಲ್ಲಿ ಹಣ ಹೂಡಿದ್ದು, ಸಹ ಮಾಲೀಕತ್ವ ಪಡೆದಿದ್ದಾರೆ.
ದೇಶದಲ್ಲಿ ಕಬಡ್ಡಿ ಪ್ರೋ ಲೀಗ್ ಜನಪ್ರಿಯತೆ ಇನ್ನಿತರ ಆಟಗಳ ಮೇಲು ಪ್ರಭಾವ ಬೀರಿದೆ.
ಯುಪಿ ವಾರಿಯರ್ಸ್ ತಂಡದಲ್ಲಿ ಹಣ ಹೂಡುವ ಮೂಲಕ ಕುಸ್ತಿಯ ಅಭಿವೃದ್ಧಿಗೆ ಕೈಜೋಡಿಸಿದ್ದೇನೆ. ಇದರಿಂದ ನನಗೆ ಬಹಳ ಸಂತೋಷವಾಗುತ್ತಿದೆ. ನಮ್ಮ ತಂಡದಲ್ಲಿ ಖ್ಯಾತ ಕುಸ್ತಿ ಪಟು ಸುಶೀಲ್ ಕುಮಾರ್ ಸೇರಿದಂತೆ ಸಾಕಷ್ಟು ಉತ್ತಮ ಕುಸ್ತಿ ಪಟುಗಳಿದ್ದು, ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.