ಕ್ರೀಡೆ

ಕೋಲ್ಕತಾ ಮಣಿಸಿದ ಚೆನ್ನೈಯಿನ್

Rashmi Kasaragodu
ಪುಣೆ:  ಪ್ರಮುಖ ಆಟಗಾರರ ಹೊರತಾಗಿಯೂ  ಕಣಕ್ಕಿಳಿದಿದ್ದ ಮಾರ್ಕೋ ಮಾರ್ಗದರ್ಶನದ ಚೆನ್ನೈಯಿನ್ ಎಫ್ ಸಿ, ಇಂಡಿಯನ್ ಸೂಪರ್  ಲೀಗ್ (ಐಎಸ್‍ಎಲ್) ಪಂದ್ಯಾವಳಿಯ ಮೊದಲ ಸುತ್ತಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ  ಅಟ್ಲೆಟೆಕೊ ಡಿ ಕೋಲ್ಕತಾ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ಲೀಗ್ ಹಂತದಲ್ಲಿ ಹಳದಿ ಕಾರ್ಡು ಪಡೆದ ಹಿನ್ನೆಲೆಯಲ್ಲಿ, ಚೆನ್ನೈಯಿನ್ ತಂಡದ ಪ್ರಮುಖ ಆಟಗಾರ ಎಲಾನೊ ಬ್ಲುಮರ್ ಹಾಗೂ  ಡಿಫೆಂಡರ್ ಮೆಹ್ರಾಜುದ್ದೀನ್ ವಾಡೂ ಮೊದಲ  ಸುತ್ತಿನ ಸೆಮಿಫೈನಲ್ ಹಂತದಿಂದ ದೂರ  ಉಳಿದಿದ್ದರು. ಇದರ ಜತೆಗೆ, ಮಿಡ್‍ಫೀಲ್ಡರ್  ರಾಫೆಲ್ ಅಗಸ್ಟೊ ಸಹ ಗಾಯದ ಸಮಸ್ಯೆಗೆ  ತುತ್ತಾಗಿರುವುದು ಚೆನ್ನೈಗೆ ಮತ್ತೊಂದು  ತೊಡಕಾಗಿತ್ತು.  ಶನಿವಾರ, ಇಲ್ಲಿನ ಛತ್ರಪತಿ ಶಿವಾಜಿ  ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಇತ್ತಂಡಗಳ ಭಾರೀ ಪೈಪೋಟಿಯಿಂದಾಗಿ,  ಮೊದಲಾರ್ಧ ಮುಗಿಯುವವರೆಗೂ  ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ,  38ನೇ ನಿಮಿಷದಲ್ಲಿ ಬ್ರುನೋ ಪೆಲಿಸ್ಸಾರಿ ಗಳಿಸಿ ಫ್ರೀ ಕಿಕ್‍ನಿಂದಾಗಿ ತನ್ನ ಗೋಲಿನ ಖಾತೆ ತೆರೆದ  ಚೆನ್ನೈಯಿನ್, ಆನಂತರ 57ನೇ ನಿಮಿಷದಲ್ಲಿ  ಜೆಜೆ ಹಾಗೂ 68ನೇ ನಿಮಿಷದಲ್ಲಿ ಮೆಂಡೋಜಾ  ವ್ಯಾಲೆನ್ಸಿಯಾ ಗಳಿಸಿದ ಗೋಲುಗಳ  ಸಹಾಯದಿಂದ ಕೋಲ್ಕತಾ ವಿರುದ್ಧ 3-0 ಗೋಲುಗಳ ಅಂತರವನ್ನು ಹೆಚ್ಚಿಸಿಕೊಂಡಿತು.  ಅಂದೇ ಅಂತರದಲ್ಲಿ ಪಂದ್ಯ ಮುಗಿದ  ಹಿನ್ನೆಲೆಯಲ್ಲಿ, ಚೆನ್ನೈಯಿನ್ ಕೋಲ್ಕತಾವನ್ನು  ಮಣಿಸುವಲ್ಲಿ ಯಶಸ್ವಿಯಾಯಿತು.
SCROLL FOR NEXT