ಕ್ರೀಡೆ

ವಿಕಾಸ್ ಗೆ ಒಲಿಂಪಿಕ್ಸ್ ಗೆ ಅರ್ಹತೆ

Rashmi Kasaragodu
ನವದೆಹಲಿ: ರಾಜ್ಯದ ಡಿಸ್ಕಸ್ ತ್ರೋ ಪಟು ವಿಕಾಸ್ ಗೌಡ, ಮುಂದಿನ ವರ್ಷ ನಡೆಯಲಿರುವ  ರಿಯೋ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆದಿದ್ದಾರೆ.ಈ ಮಹಾ ಕ್ರೀಡಾಕೂಟಕ್ಕಾಗಿ ಅರ್ಹತೆ  ಪಡೆಯಲು ಅಥ್ಲೀಟ್‍ಗಳಿಗೆ ಇದ್ದ ನಿಯಮಾವಳಿಗಳ  ನ್ನು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್  ಸಂಸ್ಥೆ (ಐಎಎಎಫ್ ) ಸಡಿಲಗೊಳಿಸಿದ್ದರಿಂದ  ವಿಕಾಸ್ ಗೌಡ ಅವರಿಗೆ ಈ ಅವಕಾಶ ಸಿಕ್ಕಿದೆ.
ವಿಕಾಸ್ ಜತೆಗೆ, 20 ಕಿ.ಮೀ. ರೇಸ್  ವಾಕರ್ ಸಪ್ನಾ ಹಾಗೂ ಪುರುಷರ  ಮ್ಯಾರಥಾನ್ ಓಟಗಾರ ನಿತೇಂದ್ರ ಸಿಂಗ್  ರಾವತ್‍ಗೂ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವ  ಅರ್ಹತೆ ಸಿಕ್ಕಿದೆ.  ಇದನ್ನು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ  ಕಾರ್ಯದರ್ಶಿ ಸಿ.ಕೆ. ವಾಲ್ಸನ್ ಸಹ  ದೃಢಪಡಿಸಿದ್ದಾರೆ.
ಕೈತಪ್ಪಿದ್ದ ಅವಕಾಶ: ಮೇ ತಿಂಗಳಲ್ಲಿ  ಜಮೈಕಾದ ಕಿಂಗ್‍ಸ್ಟನ್‍ನಲ್ಲಿ ನಡೆದಿದ್ದ,  ಅಂತಾರಾಷ್ಟ್ರೀಯ ಆಹ್ವಾನಿತ ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ ವಿಕಾಸ್ ಗೌಡ, 65.14  ಮೀಟರ್ ದೂರದವರೆಗೆ ಡಿಸ್ಕ್ ಎಸೆದಿದ್ದರು. ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಸುತ್ತಿನ ಪಂದ್ಯಾವಳಿಯೂ ಅದಾಗಿದ್ದರಿಂದ,  ಅಲ್ಲಿ ವಿಕಾಸ್ ಮಾಡಿದ ಈ ಸಾಧನೆ  ಒಲಿಂಪಿಕ್ಸ್ ಪ್ರವೇಶಕ್ಕೆ ಸಹಕಾರಿಯಾಗಲಿಲ್ಲ.
ಐಎಎಎಫ್ ನಿಯಮಗಳನುಸಾರ,  ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲು ಅಥ್ಲೀಟ್ ಗಳು ಕನಿಷ್ಠ 66 ಮೀಟರ್‍ಗಳವರೆಗೆ ಡಿಸ್ಕ್  ಎಸೆಯಬೇಕಿತ್ತು. ಹೀಗಾಗಿ, 0.86 ಮೀಟರ್  ಅಂತರದಲ್ಲಿ ಅವರು ಒಲಿಂಪಿಕ್ಸ್ ಅವಕಾಶ  ತಪ್ಪಿಸಿಕೊಂಡಿದ್ದರು. 
 ವರವಾಯ್ತು ನಿಯಮಾವಳಿ ಸಡಿಲಿಕೆ:  ಕಳೆದ ತಿಂಗಳು 26ರಂದು ಸಭೆ ಸೇರಿದ್ದ  ಐಎಎಎಫ್  ಕೌನ್ಸಿಲ್‍ನ ಸದಸ್ಯರ ಸಭೆಯಲ್ಲಿ ಒಲಿಂಪಿಕ್ಸ್‍ನ 17 ಕ್ರೀಡಾ ವಿಭಾಗಗಳಿಗೆ ಇದ್ದ ಅರ್ಹತಾ ನಿಯಮಗಳಲ್ಲಿ ಸಡಿಲಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
SCROLL FOR NEXT