ನವದೆಹಲಿ: ಪ್ರತಿಷ್ಠಿತ ಐ ಲೀಗ್ ಫುಟ್ಬಾಲ್ 2015-16ನೇ ಸಾಲಿನ ಟೂರ್ನಿಯು ಮುಂದಿನ ತಿಂಗಳು ಜನವರಿ 9ರಿಂದ ಆರಂಭವಾಗಲಿದ್ದು, ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಮೋಹನ್ ಬಗಾನ್ ಹಾಗೂ ನೂತನ ತಂಡವಾದ ಐಜ್ವಾಲ್ ಎಫ್ಸಿ ಮುಖಾಮುಖಿಯಾಗಲಿವೆ.
ಅಂದೇ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡ ಸಲ್ಗಾಂವ್‍ಕರ್ ತಂಡವನ್ನು ಎದುರಿಸಲಿದೆ. ಇದೇ ಮೊದಲ ಬಾರಿಗೆ ಐ ಲೀಗ್‍ಗೆ ಕಾಲಿಟ್ಟಿರುವ ಪುಣೆ ಮೂಲದ ಮತ್ತೊಂದು ತಂಡ ಡಿಎಸ್ ಕೆ ಶಿವಾಜಿಯನ್ಸ್ ತಂಡ ಬಾಳೇವಾಡಿಯಲ್ಲಿ ನಡೆಯಲಿರುವ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ತಂಡದ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.