ಕೊಲಂಬೊ: ಪಂದ್ಯದಲ್ಲಿ ಸಂಪೂರ್ಣ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿ ಯಾದ ಜಪಾನ್ ವಾರಿಯರ್ಸ್ ತಂಡ, ಇಂಟರ್‍ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಪಂದ್ಯಾವಳಿಯಲ್ಲಿ ಫಿಲಿಪೀನ್ಸ್ ಮಾವೆರಿಕ್ಸ್ ವಿರುದ್ಧ ಜಯ ಸಾಧಿಸಿದೆ.
ಶುಕ್ರವಾರ ಆರಂಭವಾದ ಸಿಂಗಾಪುರ ಹಂತದ ಮೊದಲ ಪಂದ್ಯದಲ್ಲಿ ಜಪಾನ್ ವಾರಿಯರ್ಸ್ ತಂಡ 29-15 ಅಂಕಗಳ ಅಂತರದಲ್ಲಿ ಫಿಲಿಪ್ಪೀನ್ಸ್ ಮಾವರಿಕ್ಸ್ ತಂಡವನ್ನು ಮಣಿಸಿತು. ಪುರುಷರ ಲೆಜೆಂಡ್ಸ್‍ನಲ್ಲಿ ಮರಾತ್ ಸಫಿನ್, ಜೇಮ್್ಸ ಬ್ಲೇಕ್ ವಿರುದ್ಧ 6-3 ಮುನ್ನಡೆ ಸಾಧಿಸಿದರು. ಮಹಿಳೆಯರ ಸಿಂಗಲ್ಸ್ ನಲ್ಲಿ ಕುರುಮಿ ನರಾ, ಜಾರ್ಮಿಲ್ ಗಡಸೋವಾ ವಿರುದ್ಧ 6-1, ಮಿಶ್ರ ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಮತ್ತು ಲೂಸಿಕ್ ಬರೊನಿ ಜೋಡಿ ವೆಸೆಲಿನ್ ಮತ್ತು ಜಾಮ್ರಿಲ್ ವಿರುದ್ಧ 6-2, ಪುರುಷರ ಸಿಂಗಲ್ಸ್ ನಲ್ಲಿ ಹ್ಯೂಸ್ ಹೆರ್ಬಟ್, ಇವೊ ಕಾರ್ಲೊವಿಕ್ ವಿರುದ್ಧ 6-3 ಅಂತರದ ಮುನ್ನಡೆಯೊಂದಿಗೆ ವಾರಿಯರ್ಸ್ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು.
ನಂತರ ನಡೆದ ಎರಡನೇ ಪಂದ್ಯದಲ್ಲಿ ಯುಎಇ ರಾಯಲ್ಸ್ ತಂಡ 27-23 ಅಂತರದಲ್ಲಿ ಆತಿಥೇಯ ಸಿಂಗಾಪುರ ಸ್ಲಾಮರ್ಸ್ ತಂಡವನ್ನು ಮಣಿಸಿತು. ಪುರುಷರ ಡಬಲ್ಸ್ ನಲ್ಲಿ ಮಾತ್ರ ಮಾವರಿಕ್ಸ್‍ನ ರೋಜರ್ ವೆಸ್ಸೆಲಿನ್ ಮತ್ತು ಟ್ರೀಟ್ ಹ್ಯೂಯ್ ಜೋಡಿ ಮುನ್ನಡೆ ಸಾಧಿಸಲು ನೆರವಾಯಿತು.