ನೊಯಿಡಾ: ತಂಡದ ಪ್ರಮುಖ ಆಟಗಾರರ ಅತ್ಯುತ್ತಮದ ಪ್ರದರ್ಶನದ ನೆರವಿನಿಂದ ಬೆಂಗಳೂರು ಯೋಧಾಸ್ ತಂಡ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಜಯ ದಾಖಲಿಸಿದೆ.
ಆ ಮೂಲಕ ಸೆಮಿಫೈನಲ್‍ಗೆ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಯೋಧಾಸ್ ತಂಡ ಪ್ರಬಲ ಪಂಜಾಬ್ ರಾಯಲ್ಸ್ ತಂಡವನ್ನು 52 ಅಂತರದಲ್ಲಿ ಮಣಿಸಿತು.
ಯೋಧಾಸ್ ತಂಡದ ಪರ ಪಾವ್ಲೊ ಒಲಿಯಿನಿಕ್ (97ಕೆ.ಜಿ), ಅಲಿಸ್ಸಾ ಲ್ಯಾಂಪ್ (48ಕೆ.ಜಿ), ನರಸಿಂಗ್ ಯಾದವ್ (74ಕೆ.ಜಿ), ಲಲಿತಾ ಶೆರಾವತ್ (53ಕೆ.ಜಿ), ಡೇವಿಟ್ (125ಕೆ.ಜಿ) ವಿಭಾಗದಲ್ಲಿ ಜಯ ಸಾಧಿಸುವ ಮೂಲಕ ತಂಡದ ಗೆಲುವು ದಾಖಲಿಸುವಲ್ಲಿ ಪ್ರಮುಖಪಾತ್ರ ವಹಿಸಿದರು.