ಕ್ರೀಡೆ

ಅಶ್ವಿನ್ ನಂ.1 ಆಲ್‍ರೌಂಡರ್

Srinivasamurthy VN

ದುಬೈ: ತವರಿನಲ್ಲಿ ನಡೆದ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿ ಭಾರತದ ದಿಗ್ವಿಜಯದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಸೋಮವಾರ ಬಿಡುಗಡೆಯಾಗಿರುವ ಐಸಿಸಿ  ರ್ಯಾಂಕಿಂಗ್ ಪಟ್ಟಿಯ ಆಲ್‍ರೌಂಡ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ 31.68ರ ಸರಾಸರಿಯಲ್ಲಿ 124 ರನ್ ಕಲೆಹಾಕಿದ್ದಲ್ಲದೆ, 31 ವಿಕೆಟ್‍ಗಳನ್ನು ಪಡೆದ ಅಶ್ವಿನ್, ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಹಿಂದಿಕ್ಕಿದ್ದಾರೆ. ಹೀಗಾಗಿ  ಬೌಲರ್‍ಗಳ ಪಟ್ಟಿಯಲ್ಲಿ ಅಶ್ವಿನ್ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ದ.ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮುಂದುವರೆದಿದ್ದಾರೆ. ಇನ್ನು, ಇದೇ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಗಳಿಸಿದ  ರವೀಂದ್ರ ಜಡೇಜಾ ಟಾಪ್ ಟೆನ್ ಬೌಲರ್‍ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎರಡನೇ ಬ್ಯಾಟ್ಸ್‍ಮನ್ ಎನಿಸಿದ್ದಾರೆ. ಇನ್ನು ಟೆಸ್ಟ್ ಬ್ಯಾಟ್ಸ್‍ಮನ್‍ಗಳ ಪೈಕಿ ಅಗ್ರ ಹತ್ತರಲ್ಲಿ ಭಾರತದ ಯಾವೊಬ್ಬರೂ ಕಾಣಿಸಿಕೊಂಡಿಲ್ಲ. ಇಂಗ್ಲೆಂಡ್‍ನ  ಜೋ ರೂಟ್ (886 ರೇಟಿಂಗ್) ದ್ವಿತೀಯ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (881 ರೇಟಿಂಗ್) ತೃತೀಯ ಸ್ಥಾನದಲ್ಲಿದ್ದಾರೆ. ಆನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ (874 ರೇಟಿಂಗ್), ಡೇವಿಡ್ ವಾರ್ನರ್, (863), ಪಾಕಿಸ್ತಾನದ ಯೂನಿಸ್ ಖಾನ್  (826), ದ.ಆಫ್ರಿಕಾದ ಹಾಶೀಂ ಆಮ್ಲಾ (810), ಶ್ರೀಲಂಕಾದ ಏಂಜೆಲೊ ಮಾ್ಯಥ್ಯೂಸ್ (808), ಇಂಗ್ಲೆಂಡ್‍ನ ಅಲೇಸ್ಟರ್ ಕುಕ್ (803) ಹಾಗೂ ಮಿಸ್ಬಾ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ (764) 10ನೇ  ಸ್ಥಾನದಲ್ಲಿದ್ದಾರೆ.

SCROLL FOR NEXT