ಕ್ರೀಡೆ

ಯಾರಾಗುವರು ನೂರು ಮಿಲಿಯನ್ ಡಾಲರ್ ಸರದಾರ?

Manjula VN

ಪ್ಯಾರಿಸ್: ಇದು 100 ಮಿಲಿಯನ್ ಡಾಲರ್, ಅರ್ಥಾತ್ ರು.660 ಕೋಟಿ ಕಾಳಗ! ಹೌದು, ಟೆನಿಸ್ ಲೋಕದಲ್ಲಿ ಸದ್ಯ ಇಂಥದ್ದೊಂದು ಪೈ ಪೋಟಿ ಕಾಣುತ್ತಿದೆ. ಜೊಕೊವಿಚ್ ಮತ್ತು ರೋಜರ್ ಫೆಡರರ್ ನಡುವೆ ಹಣ ಗಳಿಕೆಯ ಯುದ್ಧ ನಡೆಯುತ್ತಿದೆ. ಇವರಿಬ್ಬರಲ್ಲಿ ಯಾರು ಗೆದ್ದರೂ ಅದು ಟೆನಿಸ್ ಲೋಕದ ದೊಡ್ಡ ಮೈಲುಗಲ್ಲೇ ಸರಿ.

ವಿಶ್ವದ ನಂಬರ್‍ಒನ್ ಆಟಗಾರ ಸರ್ಬಿಯಾದ ಜೊಕೊವಿಚ್ ಈವರೆಗಿನ ತಮ್ಮ ಟೆನಿಸ್ ಜೀವನದಲ್ಲಿ 94 ಮಿಲಿಯನ್ ಡಾಲರ್ (ಸುಮಾರು ರು. 621 ಕೋಟಿ) ಮೊತ್ತ ಗಳಿಸಿದ್ದಾರೆ. 3ನೇ ಶ್ರೇಯಾಂಕಿತ ಹಾಗೂ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್ 94.3 ಮಿಲಿಯನ್ ಡಾಲರ್ (ರು.ಸುಮಾರು 643 ಕೋಟಿ) ಗಳಿಸಿದ್ದಾರೆ. ಆದರೆ ನಿಮಗೆ ತಿಳಿದಿರಲಿ, ಇದು ಕೇವಲ ಪಂದ್ಯಾವಳಿಗಳಿಂದ ಅವರು ಗಳಿಸಿದ ಹಣ ಮಾತ್ರ.

ಪ್ರತಿಷ್ಠಿತ ಕಂಪನಿಗಳ ಪ್ರಾಯೋಜಕತ್ವ ಹಾಗೂ ರಾಯಭಾರತ್ವ ಇತ್ಯಾದಿ ಮೂಲಗಳಿಂದ ಬಂದಿರುವ ಹಣದ ಲೆಕ್ಕ ಬೇರೆ. ಆದರೂ, ಕೇವಲ ಪಂದ್ಯಾವಳಿಗಳಿಂದ ಬರುವ ಲೆಕ್ಕವನ್ನು ಆಧಾರವಾಗಿಟ್ಟುಕೊಂಡು, ಸದ್ಯಕ್ಕೆ ಭರ್ಜರಿ ಫಾರ್ಮ್ ನಲ್ಲಿರುವ ಈ ಇಬ್ಬರೂ ಮುಂದಿನ ವರ್ಷ 100 ಮಿಲಿಯನ್ ಅಮೆರಿಕನ್ ಡಾಲರ್ (ರು.660 ಕೋಟಿ) ಗಳಿಸುತ್ತಾರೆಂಬ ನಿರೀಕ್ಷೆಯನ್ನು ಟೆನಿಸ್ ಲೋಕದ ಪಂಡಿತರು ಇಟ್ಟುಕೊಂಡಿದ್ದಾರೆ.

ಸಾನಿಯಾ ಗಳಿಕೆ
ಭಾರತದ ಅಗ್ರ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಈವರೆಗಿನ ವೃತ್ತಿಜೀವನದಲ್ಲಿ ರು.22 ಕೋಟಿ ಹಣ ಗಳಿಸಿದ್ದಾರೆಂಬ ಅಂದಾಜಿದೆ. 2015ರಲ್ಲೇ ಸುಮಾರು ಸುಮಾರು ರು.5 ಕೋಟಿ ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಳಿದವರಿಗೆ ಹೋಲಿಸಿದರೆ ಇವರ ಪಾಲೇ ಹೆಚ್ಚು.

SCROLL FOR NEXT