ಕ್ರೀಡೆ

ನ್ಯೂಜಿಲೆಂಡ್ ನ ಗುಪ್ಟಿಲ್ ಅಬ್ಬರಕ್ಕೆ ಶ್ರೀಲಂಕನ್ನರು ತತ್ತರ

Vishwanath S
ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. 
ನ್ಯೂಜಿಲೆಂಡ್ ನ ಹೆನ್ರಿ ಮತ್ತು ಮೆಕ್ಲೆನಘನ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕನ್ನರು ಕೇವಲ 117 ರನ್ ಗಳಿಗೆ ಆಲ್ ಔಟ್ ಆದರು. ಈ ಮೊತ್ತವನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ ಕೇವಲ 30 ಎಸೆತಗಳಲ್ಲಿ 93 ರನ್ ಸಿಡಿಸಿದರು. ಈ ಪಂದ್ಯವನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಿವೀಸ್ 2-0 ಮುನ್ನಡೆ ಪಡೆದುಕೊಂಡಿದೆ. ಮುಂದಿನ ಹಾಗೂ ಮೂರನೇ ಪಂದ್ಯ ಡಿಸೆಂಬರ್ 31ರಂದು ನೆಲ್ಸನ್'ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ಆಟಗಾರರ ಪೈಕಿ ಗುಪ್ಟಿಲ್ ಅತೀ ವೇಗದ ಅರ್ಧಶತಕ ಗಳಿಸಿ ಹೊಸ ದಾಖಲೆ ಬರೆದರು. ಗುಪ್ಟಿಲ್ ಕೇವಲ 17 ಎಸೆತಗಳಲ್ಲಿ 50 ರನ್ ಗಡಿ ದಾಟಿದರು. ವಿಶ್ವದ ಜಂಟಿ ಎರಡನೇ ವೇಗದ ಅರ್ಧಶತಕವೆಂಬ ದಾಖಲೆ ಗುಪ್ಟಿಲ್ ಹೆಸರಿಗೆ ಬಂತು. ದಕ್ಷಿಣ ಆಫ್ರಿಕಾದ ಎಬಿ ಡೀವಿಯರ್ಸ್ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ದಾಖಲೆಯಾಗಿ ಉಳಿದಿದೆ. ಇನ್ನಷ್ಟು ರನ್ ಅವಕಾಶವಿದ್ದಿದ್ದರೆ ಗುಪ್ಟಿಲ್ ಅತೀ ವೇಗದ ಶತಕದ ದಾಖಲೆಯನ್ನು ಬರೆಯುವ ಸಾಧ್ಯತೆ ಇತ್ತು.
ಶ್ರೀಲಂಕಾ ಪರ ಗುಣತಿಲಕ 17, ಧಿಲ್ಶನ್ 7, ತಿರುಮನೆ 1, ಚಂಡಿಮಲ್ 9, ನುವಾನ್ ಕುಲಸೇಕರ 19, ಏಂಜೆಲೋ ಮ್ಯಾಥ್ಯೂಸ್ 17, ಮಿಲಿಂದ ಸಿರಿವರ್ದನ 12, ಚಮರ ಕಪುಗೆದರಾ 12 ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಮಾರ್ಟಿನ್ ಗುಪ್ಟಿಲ್ ಅಜೇಯ 93, ಟಾಮ್ ಲಥಮ್ ಅಜೇಯ 17 ರನ್ ಗಳಿಸಿದ್ದಾರೆ.
SCROLL FOR NEXT