ದ. ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆ ಜಯ 
ಕ್ರೀಡೆ

ಹರಿಣಗಳಿಗೆ ಮತ್ತೆ ಮುಖಭಂಗ

ವಿಶ್ವದ ನಂ.1 ಟೆಸ್ಟ್ ತಂಡವೆನಿಸಿರುವ ದ. ಆಫ್ರಿಕಾ ಮೇಲೆ ದುರ್ದೆಸೆಯ ದಟ್ಟ ಕಾರ್ಮೋಡ ಕವಿದುಕೊಂಡಂತಾಗಿದೆ.

ಡರ್ಬನ್: ವಿಶ್ವದ ನಂ.1 ಟೆಸ್ಟ್ ತಂಡವೆನಿಸಿರುವ ದ. ಆಫ್ರಿಕಾ ಮೇಲೆ ದುರ್ದೆಸೆಯ ದಟ್ಟ ಕಾರ್ಮೋಡ ಕವಿದುಕೊಂಡಂತಾಗಿದೆ.
ಈ ವರ್ಷಾಂತ್ಯದಲ್ಲಿ ಅದು ಭಾರತ ತಂಡದ ವಿರುದ್ಧ ಅನುಭವಿಸಿದ ದಯನೀಯ ಸೋಲಿನ ಬಳಿಕ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನೂ ಸೋಲಿನೊಂದಿಗೆ ಆರಂಭಿಸಿದ್ದು, ಹೊಸ ವರ್ಷದಲ್ಲಿ ಅದರ ಅದೃಷ್ಟ ಬದಲಾಗುತ್ತದೋ ಇಲ್ಲವೋ ಕಾದು ನೋಡಬೇಕಿದೆ.
ಬುಧವಾರ ಮುಕ್ತಾಯ ಕಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ, ಮೊದಲ ಟೆಸ್ಟ್ ನಲ್ಲಿ 241 ರನ್ ಹೀನಾಯ ಸೋಲನುಭವಿಸಿದೆ.
ಇದರಿಂದಾಗಿ ಈ ಗೆಲುವಿನೊಂದಿಗೆ 4 ಪಂದ್ಯ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ
ಸಾಧಿಸಿದಂತಾಗಿದೆ. ಇತ್ತ 2015ರ ಏಪ್ರಿಲ್‍ನಲ್ಲಿ ನಡೆದಿದ್ದ ಗ್ರನೇಡಾ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯಿಸಿ ಆನಂತರ ತವರಿನಾಚೆ ಸತತ 14 ಟೆಸ್ಟ್ ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್ ಮತ್ತೆ ವಿದೇಶದಲ್ಲಿ ಜಯದ ಹಳಿಗೆ ಮರಳಿದೆ.
ಭಾನುವಾರ(ಜ.3 ) ದಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಹೊಸ ವರ್ಷ ದ.ಆಫ್ರಿಕಾಗೆ ಅದೃಷ್ಟ ತಂದುಕೊಡುತ್ತದೋ ಇಲ್ಲವೋ ಎಂಬುದು ಕೌತುಕ ಕೆರಳಿಸಿದೆ. ನಾಯಕ ಹಾಶೀಂ ಆಮ್ಲಾ ದಿವ್ಯ ವೈಫಲ್ಯವು ಕೂಡಾ ಹರಿಣಗಳ ಈ ದಯನೀಯ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಇನ್ನು ಗೆಲ್ಲಲು 416 ರನ್ ಗುರಿ ಪಡೆದು ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದ ದ.ಆಫ್ರಿಕಾ ಐದನೇ ದಿನದಾಟದಂದು ಯಾವುದೇ ಪ್ರತಿರೋಧ ತೋರದೆ 71 ಓವರ್‍ಗಳಲ್ಲಿ 174 ರನ್‍ಗಳಿಗೆ ಆಲೌಟ್ ಆಗಿ ಆಂಗ್ಲರಿಗೆ ಶರಣಾಯಿತು. 37 ರನ್‍ಗಳೊಂದಿಗೆ ಕ್ರೀಸ್‍ನಲ್ಲಿದ್ದ ಎಬಿ ಡಿವಿಲಿಯರ್ಸ್ ಏಕೈಕ ಭರವಸೆಯಾಗಿ ಉಳಿದಿದ್ದರು.  ಆದರೆ ದಿನದ ಮೊದಲ ಓವರ್ ನಲ್ಲಿಯೇ ಅವರು ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ದ.ಆಫ್ರಿಕಾ ಪತನ ನಿಶ್ಚಿತವೆನಿಸಿತು. ಅವರ ನಿರ್ಗಮನದ ನಂತರ ಮಧ್ಯಮ ಕ್ರಮಾಂಕದಲ್ಲಿ ಜೆಪಿ ಡುಮಿನಿ ಅಜೇಯ 26 ರಂ ಕಳೆಹಾಕಿದ್ದನ್ನು ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲು ವಿಫಲವಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT