ಕ್ರೀಡೆ

ಚಿನ್ನಕ್ಕೆ ಪ್ರಕಾಶ್ ಶೂಟ್ ರಾಷ್ಟ್ರೀಯ ಕ್ರೀಡಾಕೂಟ: 2ನೇ ದಿನ ರಾಜ್ಯಕ್ಕೆ 1 ಚಿನ್ನ 3 ಬೆಳ್ಳಿ, 4 ಕಂಚು

ತಿರುವನಂತಪುರ: ಕರ್ನಾಟಕದ ಶೂಟಿಂಗ್ ತಾರೆ ಪ್ರಕಾಶ್ ನಂಜಪ್ಪ ಅವರು 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸಂಪಾದಿಸಿದ್ದಾರೆ. ಸೋಮವಾರ ನಡೆದ 50 ಮೀ. ಪಿಸ್ತೂಲ್ ಶೂಟಿಂಗ್‍ನಲ್ಲಿ ಪ್ರಕಾಶ್ ನಂಜಪ್ಪ ಚಿನ್ನದ ಪದಕ ಸಂಪಾದಿಸಿದರು.

ಇನ್ನು ರೋಯಿಂಗ್‍ನಲ್ಲಿ ಕರ್ನಾಟಕಕ್ಕೆ 1 ಬೆಳ್ಳಿ ಹಾಗೂ 2 ಕಂಚಿನ ಪದಕ ಲಭಿಸಿದೆ. ಪುರುಷರ ಕಾಕ್ಸ್‍ಲೆಸ್ ಫೋರ್ 2000 ಮೀಟರ್ ವಿಭಾಗದಲ್ಲಿ ಕರ್ನಾಟಕ ತಂಡ ಬೆಳ್ಳಿ ಪದಕ ಪಡೆದಿದೆ. ಪುರುಷರ ಕಾಕ್ಸ್ ಲೆಸ್ ಏಯ್ಟ್ 2000 ಮೀಟರ್ ವಿಭಾಗದಲ್ಲಿ ರಾಜ್ಯಕ್ಕೆ ಕಂಚಿನ ಪದಕ ಲಭಿ ಸಿದೆ. ಇನ್ನು ಮಹಿಳೆಯರ ಕಾಕ್ಸ್‍ಲೆಸ್ ಫೋರ್ 2000 ಮೀಟರ್ ವಿಭಾಗದಲ್ಲೂ ಕಂಚಿನ ಪದಕ ಲಭಿಸಿದೆ.

ಪುರುಷರ ಕಾಕ್ಸ್‍ಲೆಸ್ ಫೋರ್ 2000 ಮೀಟರ್ ತಂಡದಲ್ಲಿ ಸೋಜನ್ ಮ್ಯಾಥ್ಯೂ, ಅಜಯ್ ಸಿಂಗ್, ಬಿಂಟೊ ಥಾಮಸ್, ಲಕ್ಷ್ಮಣ್ ಕಲಿಯಪ್ಪನ್ ಭಾಗವಹಿಸಿದ್ದು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈಜಿನಲ್ಲಿ ಪದಕ ಬೇಟೆ: ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಮಾಳವಿಕಾ ವಿಶ್ವನಾಥ್ ಬೆಳ್ಳಿ ಹಾಗೂ ಸಲೋನಿ ದಲಾಲ್ ಕಂಚಿನ ಪದಕ ಪಡೆದಿದ್ದಾರೆ. ಮಾಳವಿಕಾ
ಮಹಿಳೆಯರ 800 ಮೀ. ಫ್ರೀ ಸ್ಟೈನಲ್ಲಿ ಪದಕ ಗಳಿಸಿದರೆ, ಸಲೋನಿ ಮಹಿಳೆಯರ 200 ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕ ಪಡೆದರು.

ಮಹಿಳೆಯರ 4x100 ಮೀ. ಮಿಡ್ಲೆ ರಿಲೇನಲ್ಲಿ ಕರ್ನಾಟಕದ ಅನಿಶಾ ಗಾವ್‍ಂಕರ್, ಮಲ್ಲಿಕಾ, ರುತುಜಾ ಪವಾರ್, ಸಲೋನಿ ದಲಾಲ್ ಬೆಳ್ಳಿ ಪದಕ ಪಡೆದರು. ಪುರುಷರ 4x100 ಮೀ. ಮಿಡ್ಲೆ ರಿಲೇನಲ್ಲಿ ರಾಜ್ಯದ ಅಬಿsಜಿತ್ ಗಾವ್‍ಂಕರ್, ಲಿಕತ್ ಸಂಜೀವ್ ರಾಮಕೃಷ್ಣನ್, ಶಿವ ಶ್ರೀಧರ್ ಅವರು ಕಂಚಿನ ಪದಕ ಪಡೆದರು. ಈ ಮೂಲಕ ಕರ್ನಾಟಕ ಎರಡನೇ ದಿನದ ಮುಕ್ತಾಯಕ್ಕೆ 1 ಚಿನ್ನ, 4 ಬೆಳ್ಳಿ, 5 ಕಂಚಿನ ಪದಕ ಪಡೆದಿದ್ದು, ಒಟ್ಟು 10 ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

ಸೋಮ್ ಜ್ಯೋತಿಗೆ ಚಿನ್ನ: ದೆಹಲಿಯ ಕುಸ್ತಿ ಪಟು ಜ್ಯೋತಿ ಮಹಿಳೆಯರ 75ಕೆ.ಜಿ ಫ್ರೀ ಸ್ಟೈಲ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇನ್ನು ಪುರುಷರ 86 ಕೆ.ಜಿ ಫ್ರೀ ಸ್ಟೈಲ್‍ನಲ್ಲಿ ಹರ್ಯಾಣದ ಸೋಮ್ ವೀರ್ ಚಿನ್ನ ಸಂಪಾದಿಸಿದ್ದಾರೆ.

SCROLL FOR NEXT