ಕ್ರೀಡೆ

ವಿಶ್ವಕಪ್‌ನಿಂದ ಇಶಾಂತ್‌ ಔಟ್‌

Vishwanath S

ಅಡಿಲೇಡ್‌: ಫಿಟ್‌ನೆಸ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಭಾರತ ತಂಡದ ವೇಗಿ ಇಶಾಂತ್ ಶರ್ಮ ಅವರು 2015ರ ವಿಶ್ವ ಕಪ್‌ ಕೂಟದಲ್ಲಿ ಆಡಲು ಅವಕಾಶ ಕಳೆದುಕೊಂಡಿದ್ದಾರೆ  ಎಂದು ಭಾರತೀಯ ಕ್ರಿಕೆಟ್‌ ಮಂಡಳಿಯ (ಬಿಸಿಸಿಐ) ತಿಳಿಸಿದೆ.

ಗಾಯಗೊಂಡಿದ್ದ ಇಶಾಂತ್‌ ಶರ್ಮ ಅವರು ತಮ್ಮ ಒಂದು ಎಸೆತವನ್ನು ಎಸೆಯಲು ಸಾಧ್ಯವಾಗಿಲ್ಲದ ಕಾರಣ ಅವರು ವಿಶ್ವ ಕಪ್ ಕೂಟದಿಂದ ಹೊರಬಂದಿದ್ದಾರೆ.

ಗಾಯಾಳುಗಳಾಗಿದ್ದ ಇಶಾಂತ್‌, ಭುವನೇಶ್ವರ್‌ ಕುಮಾರ್‌ ಮತ್ತು ರೋಹಿತ್‌ ಶರ್ಮಾ ಅವರನ್ನು ಶನಿವಾರ ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಶಾಂತ್‌ ಅವರು ಇನ್ನೂ ಫಿಟ್‌ ಆಗಿರದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಇಶಾಂತ್‌ ಸದ್ಯ ಆಸ್ಟ್ರೇಲಿಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಅವರ ಸ್ಥಾನಕ್ಕೆ ಮೋಹಿತ್‌ ಶರ್ಮ ಆಯ್ಕೆಯಾಗುವ ಸಾಧ್ಯತೆಯಿದೆ.

ಧೋನಿ ಅವರ ಯೋಜನೆಯಲ್ಲಿ ಇಶಾಂತ್‌ ನಿರ್ನಾಯಕ ವೇಗಿಯಾಗಿದ್ದರು. ಅವರ ಅನುಪಸ್ಥಿತಿ ತಂಡಕ್ಕೆ ಪ್ರಬಲವಾದ ಹೊಡೆತವಾಗಿದೆ.

ಗಾಯಗೊಂಡವರ ಪಟ್ಟಿಯಲ್ಲಿದ್ದ ರವೀಂದ್ರ ಜಡೇಜ, ರೋಹಿತ್‌ ಶರ್ಮ ಮತ್ತು ಭುವನೇಶ್ವರ್‌ ಕುಮಾರ್‌ ಅವರು  ಫಿಟ್‌ನೆಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

SCROLL FOR NEXT