ಕ್ರೀಡೆ

ಪ್ರಸಾರ ಭಾರತಿಯಲ್ಲಿ ವಿಶ್ವಕಪ್ ನೇರ ಪ್ರಸಾರ: ಸುಪ್ರೀಂ

ನವದೆಹಲಿ: ಪ್ರಸಾರ ಭಾರತಿಯಲ್ಲಿ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ವಿಶ್ವಕಪ್ ಪಂದ್ಯಗಳ ಪ್ರಸಾರ ವಿವಾದ ಕುರಿತಂತೆ ಇಂದು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಪ್ರಸಾರ ಭಾರತಿಯು ಕೇಬಲ್ ಆಪರೇಟರ್‌ಗಳ ಜೊತೆ ಹಂಚಿಕೊಂಡು ಪ್ರಸಾರ ಮಾಡಬಹುದು ಎಂದು ಹೇಳಿದೆ.

ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ಖಾಸಗಿ ಕೇಬಲ್ ಆಪರೇಟರ್‌ಗಳ ಜೊತೆ ಹಂಚಿಕೊಳ್ಳದಂತೆ ದೂರದರ್ಶನವನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಪ್ರಸಾರ ಭಾರತಿ ಸಲ್ಲಿಸಿತ್ತು. ಈ ಮೇಲ್ಮನವಿ ಕುರಿತಂತೆ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಈ ಹಿಂದೆ ನಡೆದ ವಿಚಾರಣೆಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಪ್ರಸಾರಕ್ಕಾಗಿ ಹೊಸ ಚಾನೆಲ್ ಆರಂಭಿಸಲು ತನಗೆ ಸಾಧ್ಯವಿಲ್ಲ ಎಂದು ಪ್ರಸಾರ ಭಾರತಿ ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ನಡೆಸಲು ದೂರದರ್ಶನಕ್ಕೆ ಅನುಮತಿ ನೀಡಿದ್ದ ಸುಪ್ರೀಂಕೋರ್ಟ್, ಸ್ಟಾರ್‌ಸ್ಪೋರ್ಟ್ಸ್ ನೀಡುವ ವಿಶ್ವಕಪ್ ಸಂಬಂಧಿಸಿದ ಸುದ್ದಿಗಳ ನೇರ ಪ್ರಸಾರಕ್ಕೆ ಪ್ರತ್ಯೇಕ ಚಾನೆಲ್ ಆರಂಭಿಸುವ ಸಲಹೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.

SCROLL FOR NEXT