ಕ್ರಿಸ್ ಗೇಯ್ಲ್ 
ಕ್ರೀಡೆ

ಗೇಯ್ಲ್ ದ್ವಿಶತಕಕ್ಕೆ ಭಾರತದ ನಂಟು

ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಯ್ಲ್ ದಾಖಲಿಸಿದ ದಾಖಲೆಯ ದ್ವಿಶತಕಕ್ಕೂ ಭಾರತಕ್ಕೂ ಸಂಬಂಧವಿದೆ.

ನವದೆಹಲಿ: ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಯ್ಲ್ ದಾಖಲಿಸಿದ ದಾಖಲೆಯ ದ್ವಿಶತಕಕ್ಕೂ ಭಾರತಕ್ಕೂ ಸಂಬಂಧವಿದೆ.

ಅರೆ, ಆಸ್ಟ್ರೇಲಿಯಾದಲ್ಲಿ ಜಿಂಬಾಬ್ವೆ ವಿರುದ್ಧ ಬಾರಿಸಿದ ದ್ವಿಶತಕಕ್ಕೂ, ಭಾರತಕ್ಕೂ ಎಲ್ಲಿಯ ನಂಟು ಎಂದು ಅಚ್ಚರಿ ಪಡಬೇಡಿ. ಗೇಯ್ಲ್ ಅವರ ಅಬ್ಬರದ ಹೊಡೆತಗಳಿಗೆ ಸಾಥ್ ನೀಡಿದ ಬ್ಯಾಟ್ ತಯಾರಾಗಿದ್ದು, ಭಾರತದ ಜಲಂಧರ್‍ನಲ್ಲಿ.

ದ್ವಿಶತಕ ಬಾರಿಸಿದ ನಂತರ ಮಾತನಾಡಿದ್ದ ಗೇಯ್ಲ್, ಭಾರತದ ಆಟಗಾರ ರೋಹಿತ್ ಶರ್ಮಾ ಎರಡು ದ್ವಿಶತಕ ದಾಖಲಿಸಿದ್ದು, ಸ್ಥೂರ್ತಿಯಾಗಿತ್ತು ಎಂದು ಹೇಳಿದ್ದು ಈಗ ಹಳೆಯ ಸುದ್ದಿ. ಗೇಯ್ಲ್ ಬಳಸಿದ ಬ್ಯಾಟ್ ತಯಾರಿಸಿದ್ದು, ಪಂಜಾಬ್ ಸ್ಪೋಟ್ರ್ಸ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ಎಂಬುದು ಮತ್ತೊಂಂದು ವಿಶೇಷ.

ನಾನು ತಯಾರಿಸಿದ ಬ್ಯಾಟ್‍ನಲ್ಲಿ ಗೇಯ್ಲ್ ದ್ವಿಶತಕ ದಾಖಲಿಸಿದ್ದು ಸಂತೋಷ ತಂದಿದೆ. ಬ್ಯಾಟ್‍ನಲ್ಲಿ ಕೆಲವು ಬದಲಾವಣೆ ಮಾಡಿ, ಹೆಚ್ಚು ಸಮತೋಲನ ಕಾಯ್ದುಕೊಳ್ಳುವಂತೆ ಮಾಡಿದೆ. ಹಾಗಾಗಿ ಗೇಯ್ಲ್ ಅದ್ಭುತ ಇನಿಂಗ್ಸ್ ಆಡಲು ಸಾಧ್ಯವಾಯಿತು' ಎಂದು ಬ್ಯಾಟ್ ತಯಾರಿಸಿದ ಸ್ಪಾರ್ಟನ್ ಫ್ಯಾಕ್ಟರಿಯ ನೌಕರ ರಾಜ್‍ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾ ಅಧ್ಯಕ್ಷ Putin ಗೆ ಮೋದಿ ನಿವಾಸದಲ್ಲಿ ವಿಶೇಷ ಭೋಜನ ಕೂಟ!

ಇನ್ನೂ 2-3 ದಿನ ಅವಾಂತರ; ಫೆ. 10 ರವರೆಗೆ ನಿಯಮಗಳ ವಿನಾಯಿತಿ ಕೋರಿದ IndiGo!

ಭಾರತಕ್ಕೆ ಬಂದ ಆಪ್ತ ಗೆಳೆಯ Putin ಗೆ ಭಗವದ್ಗೀತೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ! ವಿಶೇಷ ಏನು?

ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ: ಪ್ರಧಾನಿ ಮೋದಿ

IndiGo: ಮತ್ತೆ 550 ವಿಮಾನ ರದ್ದು; ಸಂಸ್ಥೆಯ 20 ವರ್ಷದ ಇತಿಹಾಸದಲ್ಲಿ ಇದೇ ಮೊದಲು!

SCROLL FOR NEXT