ಬ್ರಿಸ್ಬೇನ್: ಹೊಸ ಋತುವಿನಲ್ಲಿ ಮತ್ತೆ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಮರಳುವ ಆಸೆ ರಷ್ಯಾದ ಟೆನಿಸ್ ಸುಂದರಿ ಮಾರಿಯಾ ಶರಪೋವಾ ಅವರದ್ದಾಗಿದೆ.
ಅದಕ್ಕಾಗಿ 2015ನೇ ಸಾಲಿನಲ್ಲಿ ಅತ್ಯುತ್ತಮ ಟೆನಿಸ್ ಆಟವಾಡುವ ಮೂಲಕ ಈ ಕನಸು ನನಸು ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ.
ಬ್ರಿಸ್ಬೇನ್ನಲ್ಲಿ ಜನವರಿ 4ರಿಂದ 11ರವರೆಗೆ ನಡೆಯಲಿರುವ ಬ್ರಿಸ್ಬೇನ್ ಇಂಟನ್ ನ್ಯಾಷನಲ್ ಡಬ್ಲ್ಯೂರ್ಟಿ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಶರಪೋವಾ, ಸುದ್ದಿಗಾರರ ಎದುರು ತಮ್ಮ ಈ ಆಸೆ ವ್ಯಕ್ತಪಡಿಸಿದ್ದಾರೆ. ಸದ್ಯ ವಿಶ್ವದ ಎರಡನೆ ಶ್ರೇಯಾಂಕಿತೆ ಶರಪೋವಾ, 2014ನೇ ಸಾಲಿನಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಪ್ರದರ್ಶನ ನೀಡಿಲ್ಲ.
ಮುಖ್ಯವಾಗಿ ಹಾಲಿ ವಿಶ್ವದ ನಂಬರ್ ಒನ್ ಅಮೆರಿಕಾದ ಸೆರೆನಾ ವಿಲಿಯಮ್ಸ್ ಎದುರು ಸತತ ವೈಫಲ್ಯ ಅನುಭವಿಸಿದ್ದಾರೆ. ಆದರೆ, ಹೊಸ ಋತುವಿನಲ್ಲಿ ಉತ್ತಮ ಆರಂಭ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.